ಪುತ್ತೂರು: ನೆಲ್ಲಿಕಟ್ಟೆ ಬರೆಕೆರೆ ಸಂಕೀರ್ಣದಲ್ಲಿ ಕಾರ್ಯಚರಿಸುತ್ತಿರುವ ಹೆಚ್ ಪಿ ಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆ್ಯಂಡ್ ಪ್ಯಾರಾ ಮೆಡಿಕಲ್ ಕಾಲೇಜು ಇದರ ವತಿಯಿಂದ ನಡೆಸಲಾಗುವ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮಕ್ಕೆ ಪುತ್ತೂರು ಸರಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಜು.16 ರಂದು ಚಾಲನೆ ನೀಡಲಾಯಿತು.

ಪುತ್ತೂರು ಕೆ.ಎಸ್.ಆರ್.ಟಿ.ಸಿ ಘಟಕದ ಉಸ್ತುವಾರಿ ಸುರೇಶ್ ದೀಪ ಪ್ರಜ್ವಲನೆ ಮೂಲಕ ಶಿಬಿರವನ್ನು ಉದ್ಘಾಟಿಸಿ, ಕಾರ್ಯಕ್ರಮದ ಯಶಸ್ಸಿಗೆ ಹಾರೈಸಿದರು.
ಕಾಲೇಜಿನ ಪ್ರಾಶುಂಪಾಲೆ ಇವ್ನೀಸ್ ಮಾತನಾಡಿ ಕಾಲೇಜಿನ ವತಿಯಿಂದ ಸಾರ್ವಜನಿಕರಿಗಾಗಿ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರ ಪ್ರಾರಂಭಗೊಂಡಿದ್ದು, ಇಮೊಗ್ಲೋಬಿನ್, ಶುಗರ್, ಗ್ರೂಪಿಂಗ್ ಮತ್ತು ಬಿ.ಪಿ ತಪಾಸಣೆ ಮಾಡಿಕೊಡಲಾಗವುದೆಂದು ತಿಳಿಸಿ, ಎಲ್ಲರೂ ಇದರ ಪ್ರಯೋಜನ ಪಡೆಯುವಂತೆ ವಿನಂತಿಸಿದರು. ಉಪನ್ಯಾಸಕಿ ರೇಣುಕಾ ,ಪುನೀತ್ ಮತ್ತು ದಿಶಾಂತ್ ಹಾಗೂ ಇತರ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಇದ್ದರು.