ಪುತ್ತೂರು: ಕೊಳ್ತಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ಜು.13 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಅರಿಕ್ಕಿಲರವರ ಅಧ್ಯಕ್ಷತೆಯಲ್ಲಿ ನಡೆಯಿತು.
2025/26ನೇ ಸಾಲಿನ ಅಧ್ಯಕ್ಷರಾಗಿ ಶೋಭಿತ್ ಕೆಮ್ಮಾರ, ಕಾರ್ಯದರ್ಶಿಯಾಗಿ ವಿಕಾಸ್ ರೈ ಕೆಳಗಿನಮನೆ, ಖಜಾಂಚಿಯಾಗಿ ಪ್ರಶಾಂತ್ ಬಾಯಂಬಾಡಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರುಗಳ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.