ವಿವೇಕಾನಂದ ಶಿಶುಮಂದಿರದ ಶ್ರೀಕೃಷ್ಣಲೋಕ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ

0

ಪುತ್ತೂರು: ವಿವೇಕಾನಂದ ಶಿಶುಮಂದಿರದ ಶ್ರೀಕೃಷ್ಣ ಲೋಕ ಕಾರ್ಯಕ್ರಮ ವಿಶಿಷ್ಟವಾದುದು. ಇದು ಮಕ್ಕಳ ಮೇಲೆ, ಅವರ ಪಾಲಕರ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಗ್ರಾಮಾಂತರ ಘಟಕದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳದಡ್ಡ ಹೇಳಿದರು.


ಪರ್ಲಡ್ಕದ ವಿವೇಕಾನಂದ ಶಿಶುಮಂದಿರದಲ್ಲಿ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಸಹಯೋಗದಲ್ಲಿ ವಿವೇಕಾನಂದ ಶಿಶುಮಂದಿರ ವಾರ್ಷಿಕವಾಗಿ ನಡೆಸುತ್ತಿರುವ ಶ್ರೀಕೃಷ್ಣಲೋಕ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಜು.14ರಂದು ಬಿಡುಗಡೆ ಮಾಡಿ ಮಾತನಾಡಿದರು. ಬಹಳ ವರ್ಷದಿಂದ ಈ ಕಾರ್ಯಕ್ರಮವನ್ನು ಹತ್ತಿರದಿಂದ ನೋಡುತ್ತ ಬಂದ ನನಗೆ ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡುವ ಅವಕಾಶ ಸಿಕ್ಕಿದೆ. ಇದು ಬಹಳ ಯಶಸ್ವಿ ಕಾರ್ಯಕ್ರಮ ಎಂದು ಹೇಳಿದ ಅವರು ಪುಟ್ಟ ಮಕ್ಕಳ ವ್ಯಕ್ತಿತ್ವ ರೂಪಿಸುವ ನಿಟ್ಟಿನಲ್ಲಿ ವಿವೇಕಾನಂದ ಶಿಶುಮಂದಿರದ ಪ್ರಯತ್ನ ವಿಶೇಷವಾದುದು. ಇದು ಪುಟ್ಟ ಮಕ್ಕಳಿಗೆ ಸಂಸ್ಕಾರ ನೀಡುವ ಶಕ್ತಿ ಕೇಂದ್ರ. ಹೀಗಾಗಿ ಅನೇಕ ಪಾಲಕರು ತಮ್ಮ ಮಕ್ಕಳನ್ನು ವಿವೇಕಾನಂದ ಶಿಶು ಮಂದಿರಕ್ಕೆ ಸೇರಿಸುತ್ತಾರೆ. ಇಲ್ಲಿ ಕಲಿತ ಅನೇಕ ಮಕ್ಕಳು ಇಂದು ವಿವಿಧೆಡೆ ಉನ್ನತ ಶಿಕ್ಷಣ ಪಡೆದು ಉದ್ಯೋಗಕ್ಕೆ ಸೇರಿ ಉತ್ತಮ ಹೆಸರನ್ನು ತಮ್ಮ ಪಾಲಕರಿಗೆ, ಶಿಕ್ಷಣ ಸಂಸ್ಥೆಗಳಿಗೆ ತಂದುಕೊಟ್ಟಿದ್ದಾರೆ ಎಂದರು.

ವಿವೇಕಾನಂದ ಶಿಶುಮಂದಿರದ ಶ್ರೀಕೃಷ್ಣಲೋಕ ಕಾರ್ಯಕ್ರಮದ ಸಮಿತಿಯ ಗೌರವಾಧ್ಯಕ್ಷೆ ಸ್ವರ್ಣೋದ್ಯಮಿ ರಾಜಿ ಬಲರಾಮ್, ಅಧ್ಯಕ್ಷ ಉದ್ಯಮಿ ಮೋಹನ ಕೆ., ಉಪಾಧ್ಯಕ್ಷೆ ಮಾಲಿನಿ ಕಶ್ಯಪ್, ಕಾರ್ಯದರ್ಶಿ ಕಿರಣ ಶಂಕರ ಮಲ್ಯ, ಕೋಶಾಽಕಾರಿ ಬ್ರಿಜೇಶ್ ರೈ ಸಣಂಗಳ, ಶಿಶುಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ರಾಜಗೋಪಾಲ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ನ್ಯಾಯವಾದಿ ಶಿವಪ್ರಸಾದ ಇ, ವಿವೇಕಾನಂದ ಸಿಬಿಎಸ್‌ಇ ಶಾಲೆಯ ಸಂಚಾಲಕ ಭರತ್ ಪೈ, ಶ್ರೀಕೃಷ್ಣಲೋಕ ಕಾರ್ಯಕ್ರಮದ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಶಿಶುಮಂದಿರದ ಸಂಚಾಲಕ ಅಕ್ಷಯ್ ಕುಮಾರ್ ಮತ್ತು ಆಡಳಿತ ಮಂಡಳಿಯ ಸದಸ್ಯರು, ವಿಶ್ವ ಹಿಂದೂ ಪರಿಷತ್ ಪುತ್ತೂರು ನಗರ ಘಟಕದ ಅಧ್ಯಕ್ಷ ಎಸ್ ದಾಮೋದರ ಪಾಟಾಳಿ, ಶಿಶುಮಂದಿರದ ಮಾತಾಜಿಗಳು, ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಪ್ರತಿನಿಽಗಳಾಗಿ ಆಗಮಿಸಿದ ಶಿಕ್ಷಕಿಯರು, ಪಾಲಕರು ಉಪಸ್ಥಿತರಿದ್ದರು.

ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಽಯಲ್ಲಿ ಬೆಳಗ್ಗೆ ವಿವೇಕಾನಂದ ಶಿಶುಮಂದಿರದ ಶ್ರೀ ಕೃಷ್ಣಲೋಕ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಇಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಶ್ರೀ ಕೃಷ್ಣಲೋಕ ಕಾರ್ಯಕ್ರಮ ಸಮಿತಿಯ ಉಪಾಧ್ಯಕ್ಷೆ ಮಾಲಿನಿ ಕಶ್ಯಪ್, ಕಾರ್ಯದರ್ಶಿ ಕಿರಣ ಶಂಕರ ಮಲ್ಯ, ಕೋಶಾಽಕಾರಿ ಬ್ರಿಜೇಶ್ ರೈ ಸಣಂಗಳ, ಸದಸ್ಯರಾದ ಉಮೇಶ್ ಕುಮಾರ್ ಶಿಮ್ಲಡ್ಕ, ರಮ್ಯಾ ಭಟ್, ವಿವೇಕಾನಂದ ಶಿಶು ಮಂದಿರದ ಸಂಚಾಲಕ ಅಕ್ಷಯ ಕುಮಾರ್ ಜಿ.ಎಸ್, ವಿಶ್ವ ಹಿಂದೂ ಪರಿಷತ್ ಪುತ್ತೂರು ನಗರ ಘಟಕದ ಅಧ್ಯಕ್ಷ ಎಸ್ ದಾಮೋದರ ಪಾಟಾಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here