ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆಯ ಆಚರಣೆ

0

ಪುತ್ತೂರು: ಗುರುವಿನ ಆದರ್ಶಗಳ ಅನುಸರಣೆಯೇ ಗುರುಪೂರ್ಣಿಮೆಯ ಆಚರಣೆ ಎಂದು ಸಂಸ್ಕೃತ ಶಿಕ್ಷಕಿ ಸವಿತಾ ಹೇಳಿದರು.

ಅವರು ವಿವೇಕಾನಂದ ಆಂಗ್ಲ ಆಂಗ್ಲ ಮಾಧ್ಯಮ ಶಾಲಾ ಯಾದವಶ್ರೀ ಸಭಾಂಗಣದಲ್ಲಿ ನಡೆದ ಗುರುಪೂರ್ಣಿಮೆಯ ಮಹತ್ವವನ್ನು ಕುರಿತು ಮಾತನಾಡುತ್ತಿದ್ದರು. ಗುರುಗಳ ಮಾತನ್ನು ಸರಿಯಾಗಿ ಅನುಸರಿಸಿ, ಜೀವನದಲ್ಲಿ ಯಶಸ್ಸು ಸಾಧಿಸಿದ ಏಕಲವ್ಯ, ಜಿನ ಮುನಿ ಇಂದ್ರಭೂತಿ ಗೌತಮರ ಉದಾಹರಣೆಗಳನ್ನು ತಿಳಿಸಿದ ಅವರು, ಗೌತಮ ಬುದ್ಧ ತನ್ನ ಪ್ರಥಮ ಧರ್ಮೋಪದೇಶವನ್ನೂ ಇದೇ ದಿನ ಅಂದರೆ ಆಷಾಢ ಶುಕ್ಲ ಹುಣ್ಣಿಮೆಯಂದೇ ಮಾಡಿದ್ದನ್ನೂ ಅವರು ಉಲ್ಲೇಖಿಸಿದರು. ಹತ್ತನೇ ತರಗತಿಯ ಅನನ್ಯಾ ನಾವಡ ಗುರುಪೂರ್ಣಿಮೆಯ ಮಹತ್ವವನ್ನು ತನ್ನದೇ ಶೈಲಿಯಲ್ಲಿ ತಿಳಿಸಿದರು.

ವೇದಿಕೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಪ್ರಾಥಮಿಕ ವಿಭಾಗ ಮುಖ್ಯಸ್ಥೆ ಸಂಧ್ಯಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ನಡೆಸುವಾಗ ಮಕ್ಕಳಿಂದ ಭಕ್ತಿ ಗೀತೆ ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಿಸಲಾಯಿತು. ಸಹಶಿಕ್ಷಕಿ ಸೌಮ್ಯಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here