ಪುತ್ತೂರು: ಮುಂಡೂರು ಸ.ಉ.ಹಿ.ಪ್ರಾ ಶಾಲೆಯ 2025-26ನೇ ಸಾಲಿನಲ್ಲಿ ಶಾಲಾ ಮಂತ್ರಿಮಂಡಲದ ರಚನೆಯನ್ನು ಮತದಾನದ ಮೂಲಕ ನಡೆಸಲಾಯಿತು. ಶಾಲಾ ಮುಖ್ಯ ಮಂತ್ರಿಯಾಗಿ 8ನೇ ತರಗತಿಯ ಮುಹಮ್ಮದ್ ರಾಝಿಕ್, ಉಪಮುಖ್ಯಮಂತ್ರಿಯಾಗಿ 7ನೇ ತರಗತಿಯ ನಮಿತ್ ಕೆ.ಎಸ್ ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ ಫಾತಿಮತ್ ಸನ ಎ.ಎಚ್ ಹಾಗೂ ಹಲಿಮತ್ ಹಿಬಾ, ಆರೋಗ್ಯ ಮಂತ್ರಿಯಾಗಿ ತನುಶ್ರೀ ಹಾಗೂ ಹಾರ್ದಿಕ್ ನಾಯ್ಕ, ಸಾಂಸ್ಕೃತಿಕ ಮಂತಿಯಾಗಿ ಅಸ್ನ, ನಿರಿಕ್ಷಾ ಬಿ, ಸಮೀಕ್ಷಾ, ಲತಾಶ್ರಿ, ಭವಿಷ್ ಅಂಚನ್, ಚೇತನ್, ಕ್ರೀಡಾ ಮಂತ್ರಿಯಾಗಿ ತಶ್ರೀಫ ಹಾಗೂ ಭವಿತ್ ಕೆ ಆಯ್ಕೆಯಾದರು.
ಕಾನೂನು ಮಂತ್ರಿಯಾಗಿ ಮುಹಮದ್ ಹಫೀಸ್, ಫಾತಿಮತ್ ಪರ್ಜಾನ, ಧನ್ವಿತ ಕೆ ಆರ್, ರಕ್ಷಣಾ ಮಂತ್ರಿಯಾಗಿ ತೇಜಸ್, ರಕ್ಷಿತ್ ಅಂಚನ್, ಸ್ವಚ್ಛತಾ ಮಂತಿಯಾಗಿ ಕಾವ್ಯಶ್ರೀ, ನಿಕೇತ್ ಬಿ, ನೀರಾವರಿ ಮಂತ್ರಿಯಾಗಿ ಮಹಮ್ಮದ್ ನುಫೈಸ್, ನಿಶಾನ್ ಪೂಜಾರಿ, ತೃಷ, ಆಹಾರ ಮಂತ್ರಿಯಾಗಿ ರಶ್ಮಿತ ಪಿ, ಆಯಿಷತ್ ಶಾನಿದಾ, ಅಯಿಷತ್ ಹನಾ, ಫಾತಿಮತ್ ಅಫ್ನ, ಗ್ರಂಥಾಲಯ ಮಂತ್ರಿಯಾಗಿ ದೀಕ್ಷಾ ಎ, ಫಾತಿಮತುಲ್ ಸಲ್ವಾ ಆಯ್ಕೆಯಾಗಿದ್ದಾರೆ.
ವಿರೋಧ ಪಕ್ಷದ ನಾಯಕಿಯಾಗಿ ಸಾನ್ವಿ ಆರ್, ಉಪವಿರೋಧ ಪಕ್ಷದ ನಾಯಕರಾಗಿ ಶ್ರೀತನ್, ಅರ್ಪಿಯ ಫಾತಿಮಾ, ನ್ವಿತಾ ಎ, ಸಭಾಪತಿಯಾ ತೇಜಸ್, ದೀಕ್ಷಾ ಎ, ಫಾತಿಮತ್ ತಸ್ರಿಫಾ, ಸಾನ್ವಿ ಆರ್ ಆಯ್ಕೆಗೊಂಡಿದ್ದಾರೆ.