ವಿಟ್ಲ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಮಾಡತ್ತಾರು ಇದರ ಆಶ್ರಯದಲ್ಲಿ ಶ್ರೀ ಪುಣ್ಯ ಕುಮಾರ ದೇವಸ್ಥಾನದ ವಠಾರದಲ್ಲಿ ಆ.17ರಂದು ನಡೆಯಲಿರುವ 13ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಕ್ಷೇತ್ರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಪುಣ್ಯ ಕುಮಾರ ದೇವಸ್ಥಾನದ ಅಧ್ಯಕ್ಷರಾದ ಶ್ರೀಧರ್ ಹೆಗ್ಡೆ ಉಳಿಯ, ಕಾರ್ಯದರ್ಶಿ ಉಮೇಶ್ ಆಚಾರ್ಯ ಕಲ್ಲೇಗ ಮಾಜಿ ಕಾರ್ಯದರ್ಶಿ ನಾರಾಯಣ ಗೌಡ ಕಲ್ಲೇಗ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ ಗೌಡ ಪೋಳ್ಯ, ಶ್ರೀ ಪುಣ್ಯ ಕುಮಾರ ಯುವಕ ಮಂಡಲದ ಅಧ್ಯಕ್ಷರಾದ ಸುನೀಲ್ ಪಲ್ಲತ್ತಾರು, ಶ್ರೀ ದುರ್ಗಾ ಪೂಜಾ ಸೇವಾ ಸಮಿತಿಯ ಅಧ್ಯಕ್ಷರಾದ ಕೇಶವ ಪೂಜಾರಿ ಕಲ್ಲೇಗ ಹಾಗೂ ಸಮಿತಿ ಸದ್ಯಸರು ಉಪಸ್ಥಿತರಿದ್ದರು.