ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ಪಿಯು ಕಾಲೇಜಿನ ಉಪನ್ಯಾಸಕಿ ರಜತ ಎಂ. ಅವರು ಮಂಡಿಸಿರುವ ‘ಸಿಂಥೆಸಿಸ್ ಆಂಡ್ ಬಯಲಾಜಿಕಲ್ ಆಕ್ಟಿವಿಟಿ ಸ್ಟಡೀಸ್ ಆಫ್ ಅರೈಲ್ ಹೈಡ್ರೋಜೋನ್ಸ್ ಆಂಡ್ ಹೆಟಿರೋಸೈಕ್ಲಿಕ್ ಕಾಂಪೌಂಡ್ಸ್ ‘ ಎಂಬ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಹೆಚ್ಡಿ ಪದವಿ ಪ್ರದಾನ ಮಾಡಿದೆ.
ಇವರು ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಪ್ರಾದ್ಯಾಪಕರಾದ ಡಾ. ಜಗದೀಶ್ ಪ್ರಸಾದ್ ಡಿ. ಇವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು.
ಇವರು ಮುದ್ಯ ರವೀಂದ್ರ ಗೌಡ ಮತ್ತು ಪ್ರೇಮಾ ದಂಪತಿಯ ಪುತ್ರಿಯಾಗಿದ್ದು, ಶಾಂತಿಗೊಡು ಕಕ್ವೆ ಸಚಿನ್ ಬಿ.ಕೆ. ಅವರ ಪತ್ನಿ.