ಪುತ್ತೂರು: ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ಇದರ ಆಶ್ರಯದಲ್ಲಿ ಕುಟುಂಬ ಸಮ್ಮಿಲನ, ಕೆಸರುಗದ್ದೆ ಕ್ರೀಡಾಕೂಟ ನಾಗೇಶ್ ಪಟ್ಟೆಮಜಲು ಹಾಗೂ ಸುಂದರ ಪೂಜಾರಿ ಪಟ್ಟೆಮಜಲು ಅವರ ಗದ್ದೆಯಲ್ಲಿ ನಡೆಯಿತು.

ಯುವಕ ಮಂಡಲದ ಗೌರವವಾಧ್ಯಕ್ಷ ವಸಂತ್ ಎಸ್.ಡಿ ಸರ್ವೆದೋಳಗುತ್ತು ಅಧ್ಯಕ್ಷತೆ ವಹಿಸಿದ್ದರು. ಇನ್ನೂರ್ವ ಗೌರವ ಸಲಹೆಗಾರ ಡಾ. ಸೀತಾರಾಮ್ ಭಟ್ ಕಲ್ಲಮ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನೋರ್ವ ಗೌರವ ಸಲಹೆಗಾರ ಶ್ರೀನಿವಾಸ್ ಹೆಚ್.ಬಿ, ಅತಿಥಿಯಾಗಿದ್ದ ಲೋಕೇಶ್ ಸುವರ್ಣ ಸಮಯೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಸಂಜೀವ ಪೂಜಾರಿ, ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜೇತರಿಗೆ ಬಹುಮಾನದ ವ್ಯವಸ್ಥೆ ಮಾಡಲಾಗಿತ್ತು.
ಷಣ್ಮುಖ ಯುವಕ ಮಂಡಲದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಮನೋಜ್ ಸುವರ್ಣ ಸೊರಕೆ ಅವರ ತೆರವಾದ ಪ್ರ.ಕಾರ್ಯದರ್ಶಿ ಸ್ಥಾನಕ್ಕೆ ಗೌತಮ್ ಪಟ್ಟೆಮಜಲು ಅವರನ್ನು ನೂತನ ಪ್ರ.ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದ್ದು ಅವರಿಗೆ ನಿರ್ಗಮನ ಕಾರ್ಯದರ್ಶಿ ಅಧಿಕಾರ ಹಸ್ತಾಂತರ ಮಾಡಿದರು.
ಯುವಕ ಮಂಡಲದ ಅಧ್ಯಕ್ಷ ಗೌತಮ್ ರಾಜ್ ಕರುಂಬಾರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗೌತಮ್ ಪಟ್ಟೆಮಜಲು ವಂದಿಸಿದರು. ಕಾರ್ಯಾಕಾರಿ ಸಮಿತಿಯ ಸಂಚಾಲಕ ರಾಮಣ್ಣ ಪೂಜಾರಿ ಭಕ್ತಕೋಡಿ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ಪಟ್ಟೆಮಜಲು ಕಾರ್ಯಕ್ರಮ ಸಂಯೋಜಿಸಿದರು.