ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮಂಗಳೂರು ಮಹಾನಗರದ ‘ಕೆಸರಿನಲ್ಲಿ ಒಂದು ದಿನ’ ಕಾರ್ಯಕ್ರಮ

0

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರದ ‘ಕೆಸರಿನ ಗದ್ದೆಯಲ್ಲಿ ಒಂದು ದಿನ’ ಕಾರ್ಯಕ್ರಮ ಆಲಂಕಾರು ಮಾಯಿಲ್ಗ ಗದ್ದೆಯಲ್ಲಿ ಜು.20ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರ ಸಂಚಾಲಕ ಆನಂದ ಕುಂಟಿನಿ ವಹಿಸಿದರು. ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಕೆಸರು ಗದ್ದೆಗೆ ಹಾಲು ಎರೆದು ಕ್ರೀಡಾಕೂಟವನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಿ ಕೃಷಿಯ ಸದ್ಯದ ಪರಿಸ್ಥಿತಿ ಹಾಗೂ ಅದರಲ್ಲಿ ಯುವಜನತೆಯ ಪಾತ್ರದ ಬಗ್ಗೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ| ಸುರೇಶ್ ಕೂಡೂರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಕೋರಿದರು.ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷರು ಸುಶೀಲ, ಹಾಗೂ ಪೆರಾಬೆ ಗ್ರಾಮ ಪಂಚಾಯತ್ ಅಧ್ಯಕ್ಷರು ಸಂಧ್ಯಾ ಕೆದ್ದೋಟೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸೇವಾ ವಿಭಾಗ ಸಮಿತಿಯ ಪ್ರಾಂತ ಸಂಚಾಲಕ ರವೀಶ್ ಕುಮಾರ್ ಇವರು ಪ್ರಾಸ್ತಾವಿಕ ನುಡಿಗಳಾಡಿದರು. ಮಾಯಿಲ್ಗ ಗದ್ದೆಯ ಮಾಲೀಕ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮವನ್ನು ಸಮಿತಿಯ ಶ್ರೀ ಭಾರತಿ ಶಾಖೆಯ ಯೋಗಬಂಧು ಮುತ್ತಪ್ಪ ಪ್ರಾರ್ಥಿಸಿ, ಸಮಿತಿಯ ಉಪ್ಪಿನಂಗಡಿ ನಗರ ಸಂಚಾಲಕ ಸಂತೋಷ್ ಕುಮಾರ್ ಸ್ವಾಗತಿಸಿದರು ಹಾಗೂ ಉಪ್ಪಿನಂಗಡಿ ನಗರ ವರದಿ ಪ್ರಮುಖರಾದ ಮುರಳಿ ಮೋಹನ್ ವಂದಿಸಿದರು.ಚೇತನ್ ಕುಮಾರ್ ಆನೆಗುಂಡಿ ನಿರೂಪಿಸಿದರು.

ಯೋಗ ಬಂಧುಗಳು ಹಾಗೂ ಅವರ ಕುಟುಂಬಿಕರಿಗೆ ವಯೋಮಿತಿಗೆ ಅನುಗುಣವಾಗಿ ವಿವಿಧ ಆಟೋಟಗಳನ್ನು ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಮನರಂಜನೆ ಸಹಿತ ನಡೆಸಲಾಯಿತು.

ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ಆಲಂಕಾರು ಸಮಿತಿಯ ಶ್ರೀ ಭಾರತಿ ಶಾಖೆ ಯೋಗ ಶಿಕ್ಷಕಿ ಮಲ್ಲಿಕಾ ವಹಿಸಿದ್ದರು.ನೇತ್ರಾವತಿ ವಲಯ ಸಮಿತಿಯ ನಿಕಟಪೂರ್ವ ಸಂಚಾಲಕ ಗೋಕುಲನಾಥ್ ಸಮಾರೋಪ ನುಡಿಗಳನ್ನು ಆಡಿದರು. ಉದ್ಯಮಿ ಕೇಶವ ಅಮೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕೃಷಿಯೊಂದಿಗೆ ಕಳೆದ ತಮ್ಮ ಬಾಲ್ಯವನ್ನು ನೆನೆಯುತ್ತ ಶುಭಾಶಯಗಳನ್ನು ಕೋರಿದರು.

ಸಮಿತಿಯ ಉಪ್ಪಿನಂಗಡಿ ನಗರ ಶಿಕ್ಷಣ ಪ್ರಮುಖರು ಪ್ರದೀಪ್, ಸೇವಾ ವಿಭಾಗ ಸಮಿತಿಯ ಪ್ರಾಂತ ಸಂಚಾಲಕ ರವೀಶ್ ಕುಮಾರ್, ಮಂಗಳೂರು ನಗರ ಸಂಚಾಲಕ ಪ್ರಕಾಶ್, ಸಹಸಂಚಾಲಕರುಗಳಾದ ದಾಮೋದರ್ ಹಾಗೂ ಗೀತಾ ಹಾಗೂ ಉಮೇಶ್, ಸ್ಥಳದ ಯಜಮಾನರು ಉಪಸ್ಥಿತರಿದ್ದರು.

ಉಪ್ಪಿನಂಗಡಿ ನಗರ ಶಿಕ್ಷಣ ಸಹಪ್ರಮುಖ ಕೃಷ್ಣಪ್ಪ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ನಾರಾಯಣ ನೆಕ್ಕರೆ ವಂದಿಸಿದರು. ಶ್ರೀ ಭಾರತಿ ಯೋಗ ಶಾಖೆಯ ಶಿಕ್ಷಕ ಗುರುಕಿರಣ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ಹಾಗೂ ಉಪ್ಪಿನಂಗಡಿಯ 450ಕ್ಕೂ ಅಧಿಕ ಯೋಗ ಹಾಗೂ ಯೋಗೇತರ ಬಂಧುಗಳು ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರದ ಸಂಚಾಲಕ ಆನಂದ ಕುಂಟಿನಿ, ಉಪ್ಪಿನಂಗಡಿ ನಗರ ಸಂಚಾಲಕ ಸಂತೋಷ್ ಕುಮಾರ್, ಶಿಕ್ಷಣ ಪ್ರಮುಖರಾದ ಪ್ರದೀಪ್ ಹಾಗೂ ಶಿಕ್ಷಣ ಸಹಪ್ರಮುಖರಾದ ಕೃಷ್ಣಪ್ಪ ಇವರ ಮಾರ್ಗದರ್ಶನದಲ್ಲಿ ಆಲಂಕಾರು ಶ್ರೀ ಭಾರತಿ ಶಾಖೆ ಇವರ ಆತಿಥ್ಯದಲ್ಲಿ ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here