ವಿಟ್ಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಸಾಂಸ್ಕೃತಿಕ ಸಂಘ ನೇರಳಕಟ್ಟೆ ಇದರ ಆಶ್ರಯದಲ್ಲಿ ಆ.27ರಿಂದ ಆ.29ರ ವರೆಗೆ ನೇರಳಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ವಠಾರದಲ್ಲಿ ನಡೆಯಲಿರುವ 30 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರುಗಳಾದ ಭೋಜನಾರಾಯಣ ಮೂಲ್ಯ ಗಣೇಶನಗರ, ರಾಮಚಂದ್ರ ಮೂಲ್ಯ ಗಣೇಶನಗರ, ಅಧ್ಯಕ್ಷರಾದ ಬೇಬಿ ನಾಯ್ಕ ನೇರಳಕಟ್ಟೆ, ಕೋಶಾಧಿಕಾರಿ ರೋಹಿತ್ ಕುಮಾರ್ ಗಣೇಶನಗರ ಪ್ರಮುಖರಾದ ವಿಠಲ ನಾಯ್ಕ್, ಪ್ರೇಮ ನಾಯ್ಕ್, ರೇಖಾ, ಕೂಸಪ್ಪ ಎಲ್.ಐ.ಸಿ., ನೀಲಯ್ಯ, ಸ್ವಾತಿ, ಪುಷ್ಪರಾಜ್, ಉಪೇಂದ್ರ, ರವಿ, ಮಧುಕರ ಮೊದಲಾದವರು ಉಪಸ್ಥಿತರಿದ್ದರು.