ಕರ್ನಾಟಕ ಗಮಕ ಕಲಾ ಪರಿಷತ್ ಹಾಗೂ ಪುತ್ತೂರು ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಗಮಕ ಕಾರ್ಯಕ್ರಮ

0

ಪುತ್ತೂರು: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ, ಇನ್ನರ್ ವ್ಹೀಲ್ ಕ್ಲಬ್, ಪುತ್ತೂರು ಇದರ ಸ‌ಹಯೋಗದೊಂದಿಗೆ ಜು.23ರಂದು ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮವನ್ನು ಶಾಂತಿಗೋಡಿನ “ನವಚೇತನ”, ಹಿರಿಯ ನಾಗರಿಕರ ಸಮುಚ್ಚಯದ ವಠಾರದಲ್ಲಿ ನಡೆಯಿತು.

ತಾಲೂಕು ಘಟಕದ ಅಧ್ಯಕ್ಷ ಪ್ರೊ. ವೇದವ್ಯಾಸ ರಾಮಕುಂಜ ಹಾಗೂ ಗೋವಿಂದ ಭಟ್ಟ, ಮುದ್ರಾಜೆ, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಭಾಗವತ ಪುರಾಣದಿಂದ ಆಯ್ದ “ಪೂತನಿ ಮೋಕ್ಷ” ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು.ಗಮಕಿ ಗಣಪತಿ ಭಟ್ಟ ಪದ್ಯಾಣ ಗಮಕ ವಾಚನಗೈದರು. ನಿವೃತ್ತ ಪ್ರಾಂಶುಪಾಲ ಡಾI ಮಹಾಲಿಂಗ ಭಟ್, ಬಿಲ್ಲಂಪದವು ವ್ಯಾಖ್ಯಾನವನ್ನು ನಡೆಸಿಕೊಟ್ಟರು. ನವಚೇತನ ನಿವಾಸಿ ವಿಶ್ವನಾಥ ಭಟ್ಟ ಶುಭಹಾರೈಸಿದರು.

ಸ್ಥಳೀಯ ಹಿರಿಯರು ಕಲಾವಿದರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.ಇನ್ನರ್ ವ್ಹೀಲ್ ಅಧ್ಯಕ್ಷರಾದ ರೂಪಲೇಖ,ಕಾರ್ಯದರ್ಶಿ ಸಂಧ್ಯಾ ಸಾಯ ಮತ್ತು
ನಿರ್ದೇಶಕಿ ಶಂಕರಿ ಎಂ. ಎಸ್. ಭಟ್ ಹಾಗೂ ಗಮಕ ಕಲಾ ಪರಿಷತ್ತಿನ ಗೌರವಾಧ್ಯಕ್ಷ ಭಾಸ್ಕರ ಬಾರ್ಯ, ಉಪಾಧ್ಯಕ್ಷರಾದ ವತ್ಸಲಾ ರಾಜ್ಞಿ ಹಾಗೂ ಸಮುಚ್ಚಯದ ಸ್ಥಳೀಯ ನಿವಾಸಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಾವಿತ್ರಿ ಭಟ್, ಬಡೆಕ್ಕಿಲ ಸ್ವಾಗತಿಸಿದರು. ಗಂಗಾ ಪ್ರಾರ್ಥಿಸಿದರು. ವೇದವ್ಯಾಸರು ವಂದಿಸಿದರು.ಘಟಕದ ಕಾರ್ಯದರ್ಶಿ ಶಂಕರಿ ಶರ್ಮ ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here