ಪುತ್ತೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಹಾಸಭೆ

0

ಪುತ್ತೂರು: ಪುತ್ತೂರು ತಾಲೂಕಿನ ಮಹಿಳಾ ಮಂಡಲಗಳ ಒಕ್ಕೂಟದ ಮಹಾಸಭೆಯು ಬೊಳುವಾರಿನಲ್ಲಿರುವ ನವನೀತ ಸಭಾಂಗಣದಲ್ಲಿ ಪ್ರೇಮಲತಾ ರಾವ್ ರವರ ಅಧ್ಯಕ್ಷತೆಯಲ್ಲಿ ಜು.23ರಂದು ನಡೆಯಿತು.

ಇಂದಿರಾ ಮತ್ತು ಶಾಂತ ಪ್ರಾರ್ಥಿಸಿದರು. ಪುತ್ತೂರು ತಾಲೂಕಿನ ಅಧ್ಷಕ್ಷೆ ಉಷಾ ನಾಯಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ ವರದಿ ಮಂಡಿಸಿ ಧನ್ಯವಾದ ಸಮರ್ಪಿಸಿದರು. ನಿಕಟ ಪೂರ್ವ ಕಾರ್ಯದರ್ಶಿಪೂರ್ಣಿಮ ಶೆಟ್ಟಿ ತಮ್ಮ ಅವಧಿಯಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಸಂಘದ ಸದಸ್ಯರಾದ ಗೌರಿ ಬನ್ನೂರು ಹಾಗೂ ಜ್ಯೋತಿ ನಾಯಕ್ ಸೂಕ್ತ ಸಲಹೆ ಸೂಚನೆ ನೀಡಿದರು. ಉಪಾಧ್ಯಕ್ಷೆ ಪ್ರೇಮಾ ಕೆಮ್ಮಾಯಿ ಹಾಗೂ ರಮಣಿ ಗಾಣಿಗ, ಜೊತೆ ಕಾರ್ಯದರ್ಶಿ ಪ್ರೇಮಲತಾ ನಂದಿಲ, ಕ್ರೀಡಾ ಮತ್ತು ಸಾಂಸ್ಕ್ರತಿಕ ರಾಯಾಭಾರಿ ಸುಮಿತ್ರ ಸಹಕರಿಸಿದರು. ಕೊಶಾಧಿಕಾರಿ ಅನುಪಮ,ಸದಸ್ಯರಾದ ಚಂದ್ರಾವತಿ,ರೇಖಾ, ಗಾಯತ್ರಿ, ಉಷಾ ರಾಧಾಕೃಷ್ಣ ನಾಯಕ್ ಕೆ. ಸುಧಾ,ಉಷಾ,ಪದ್ಮಾವತಿ ಒಡಿಲ್ನಾಳ,ಶಾಲಿನಿ ಬನ್ನೂರು,ಅನ್ನಪೂರ್ಣೆಶ್ವರಿ,ನಳಿನಿ ಬನ್ನೂರು,ಪ್ರೇಮಲತಾ ಜಿ. ಸೇರಿದಂತೆ ಹಲವಾರು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here