ಪುತ್ತೂರು: ಉಪ್ಪಿನಂಗಡಿ ನಟ್ಟಿಬೈಲ್ ನಿವಾಸಿ, ಬೊಳುವಾರು ಕಾರ್ಪೊರೇಶನ್ ಬ್ಯಾಂಕ್ನ ಮಾಜಿ ಅಟೆಂಡರ್ ಲಕ್ಷ್ಮೀನಾರಾಯಣ (ಅಂತಣ್ಣ) (64.ವ)ರವರು ಹೃದಯಾಘಾತದಿಂದ ಜು.28ರಂದು ರಾತ್ರಿ ಮನೆಯಲ್ಲಿ ನಿಧನರಾದರು.
ಮೂಲತಃ ಪುತ್ತೂರು ಉರ್ಲಾಂಡಿ ನಿವಾಸಿಯಾಗಿರುವ ಇವರು ಇತ್ತೀಚೆಗೆ ಉಪ್ಪಿನಂಗಡಿ ನಟ್ಟಿಬೈಲ್ನಲ್ಲಿ ವಾಸ್ತವ್ಯ ಹೊಂದಿದ್ದರು. ಮೃತರು ಪತ್ನಿ ಕುಸುಮ, ಮಕ್ಕಳಾದ ಪವನ್, ನಮನ್ ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.