ಕೆಯ್ಯೂರು: ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರಿನಲ್ಲಿ ಜು.29ರಂದು ನಾಗರ ಪಂಚಮಿ ಉತ್ಸವ ನಡೆಯಿತು.
ದೇವಸ್ಥಾನದ ನಾಗ ಪ್ರತಿಷ್ಠೆ ಮಂಟಪದ ಬಳಿ ಇರುವ ನಾಗನ ಮೂರ್ತಿಗೆ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ್ ರಾವ್, ಹಿಂಗಾರ, ಹಾಲು, ಬೆಲ್ಲ, ಸೀಯಾಳ,ಜೇನುತುಪ್ಪ, ಸಕ್ಕರೆ, ಅಭಿಷೇಕ ಮಾಡಿ ಹೂವುಗಳಿಂದ ಶೃಂಗರಿಸಿ ಆರತಿ ಬೆಳಗಿದರು. ಮಧುಸೂದನ್ ಭಟ್ ಕಜೆಮೂಲೆ ಸಹಕರಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು, ಸದಸ್ಯರಾದ ಜಲಜಾಕ್ಷಿ ಎ.ರೈ ಸಾಗು, ಸುಜಯ ಕೆಯ್ಯೂರು,ಉಮಾಕಾಂತ್ ಬೈಲಾಡಿ, ಅಶೋಕ್ ರೈ ದೇರ್ಲ, ಕೆ.ಎಸ್ ಚಂದ್ರಶೇಖರ ಪೂಜಾರಿ ಕಣಿಯಾರು, ದಾಮೋದರ ಪೂಜಾರಿ ಕೆಂಗುಡೇಲು, ಹರಿನಾಥ ನಾಯ್ಕ ಇಳಂತಾಜೆ, ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರುಗಳು, ಸದಸ್ಯರುಗಳು, ಸಂಘ ಸಂಸ್ಥೆಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

