ತಲವಾರ್‌ನಿಂದ ಹಲ್ಲೆ ಪ್ರಕರಣ-ಆರೋಪಿ ದೋಷಮುಕ್ತ

0

ಪುತ್ತೂರು:ಸಹೋದರರೊಳಗಿನ ವೈಮನಸ್ಸಿನಿಂದ ತಲವಾರ್‌ನಿಂದ ಹಲ್ಲೆ ನಡೆಸಿದ್ದ ಆರೋಪಿಯನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ಪದಕ ಎಂಬಲ್ಲಿ ಘಟನೆ ನಡೆದಿತ್ತು.

ಅಣ್ಣ ತಮ್ಮಂದಿರೊಳಗೆ ವೈಮನಸ್ಸು ಇದ್ದ ಕಾರಣ ಲಕ್ಷ್ಮಣ ಗೌಡ ಎಂಬವರಿಗೆ ಅವರ ತಮ್ಮ ಪ್ರಭಾಕರ ಗೌಡ 2018ರ ಆ.27ರಂದು ರಾತ್ರಿ ಅವಾಚ್ಯ ಶಬ್ದಗಳಿಂದ ನಿಂದಿಸಿ,ತಲವಾರಿನಿಂದ ಹಲ್ಲೆ ಮಾಡಿದ್ದಾಗಿ ಆರೋಪಿಸಿ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ತನಿಖೆಯನ್ನು ಕೈಗೆತ್ತಿಕೊಂಡ ಕಡಬ ಪೊಲೀಸರು ಪುತ್ತೂರಿನ ಎರಡನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಪ್ರಭಾಕರ ಗೌಡ ನಿರ್ದೋಷಿ ಎಂದು ಪರಿಗಣಿಸಿ ಖುಲಾಸೆಗೊಳಿಸಿದೆ.ಆರೋಪಿಯ ಪರವಾಗಿ ವಕೀಲರಾದ ಸಂತೋಷ್ ಕುಮಾರ್ ಉಪ್ಪಿನಂಗಡಿ ಮತ್ತು ನಿತೇಶ್ ವಾದಿಸಿದ್ದರು.

LEAVE A REPLY

Please enter your comment!
Please enter your name here