ಕಾವು:ಭಾರತೀಯ ಜನತಾ ಪಾರ್ಟಿ ಮಾಡ್ನೂರು ಮತ್ತು ಅರಿಯಡ್ಕ ಶಕ್ತಿಕೇಂದ್ರದ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಜು.31ರಂದು ನನ್ಯ ಜನಮಂಗಲ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನನ್ಯ ಅಚ್ಚುತ ಮೂಡೆತ್ತಾಯ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜ್ರಿಮಾರು ಅಧ್ಯಕ್ಷತೆ ವಹಿಸಿ ಪ್ರಶಿಕ್ಷಣ ವರ್ಗದ ಉದ್ದೇಶದ ಕುರಿತು ಮಾತನಾಡಿದರು.ವೇದಿಕೆಯಲ್ಲಿ ಮಾಡ್ನೂರು ಶಕ್ತಿ ಕೇಂದ್ರದ ಸಂಚಾಲಕ ನಾರಾಯಣ ಆಚಾರ್ಯ ಮಳಿ,ಅರಿಯಡ್ಕ ಶಕ್ತಿ ಕೇಂದ್ರದ ಸಂಚಾಲಕ ಯುವರಾಜ್ ಪೂಂಜಾ ಉಪಸ್ಥಿತರಿದ್ದರು.

ಪ್ರಶಿಕ್ಷಣ ವರ್ಗದ ಪ್ರಥಮ ಅವಧಿಯಲ್ಲಿ ವೈಚಾರಿಕತೆ ಮತ್ತು ಪರಿವರ್ತನೆ ಎಂಬ ವಿಚಾರವಾಗಿ ಪುತ್ತೂರು ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷರಾದ ಅಪ್ಪಯ್ಯ ಮಣಿಯಾಣಿ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹಿರಿಯ ಕಾರ್ಯಕರ್ತರಾದ ಗಣೇಶ್ ಪಾಲ್ಗುಣಿ ಉಪಸ್ಥಿತರಿದ್ದರು.

ಎರಡನೇ ಅವಧಿಯಲ್ಲಿ ಬಿಜೆಪಿ ದ.ಕ ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೆಲಾಲು ಅವರು ಬೂತ್ ಮಟ್ಟದ ಸಂಘಟನೆ ಮತ್ತು ಸ್ಥಳೀಯ ಆಡಳಿತದಲ್ಲಿ ಪಾತ್ರದ ಕುರಿತು ವಿಚಾರ ಮಂಡಿಸಿದರು,ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬಿಜೆಪಿ ಹಿರಿಯ ಕಾರ್ಯಕರ್ತ ದೇವಪ್ಪ ನಾಯ್ಕ ಉಪಸ್ಥಿತರಿದ್ದರು .

ಮೂರನೇ ಅವಧಿಯಲ್ಲಿ ವಿಕಸಿತ ಭಾರತದ ಅಮೃತಕಾಲ-ನಮ್ಮ ಭೂಮಿಕೆ ಎಂಬ ವಿಷಯದ ಬಗ್ಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾವು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ ಉಪಸ್ಥಿತರಿದ್ದರು.ಬೂತ್ ಸಹ ಬೈಠಕ್ ನ್ನು ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ನಡೆಸಿಕೊಟ್ಟರು.

ಪ್ರಶಿಕ್ಷಣ ವರ್ಗದ ಸಮಾರೋಪ ಕಾರ್ಯಕ್ರಮ
ಮಾಡ್ನೂರು ಮತ್ತು ಅರಿಯಡ್ಕ ಶಕ್ತಿಕೇಂದ್ರದ ಕಾರ್ಯಕರ್ತರ ಪ್ರಶಿಕ್ಷಣ ವರ್ಗದ ಸಮಾರೋಪ ಕಾರ್ಯಕ್ರಮ ಮಧ್ಯಾಹ್ನ ನಡೆಯಿತು. ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ ಮಾತನಾಡಿದರು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತಾ ,ನೆಟ್ಟಣಿಗೆ ಮುಡ್ನೂರು ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ಮಾಡ್ನೂರು ಶಕ್ತಿಕೇಂದ್ರದ ಸಂಚಾಲಕ ನಾರಾಯಣ ಆಚಾರ್ಯ ಮಳಿ,ಅರಿಯಡ್ಕ ಶಕ್ತಿ ಕೇಂದ್ರದ ಸಂಚಾಲಕ ಯುವರಾಜ್ ಪೂಂಜಾ ಉಪಸ್ಥಿತರಿದ್ದರು .

ಕಾರ್ಯಕ್ರಮದಲ್ಲಿ ಮಾಡ್ನೂರು ಹಾಗೂ ಅರಿಯಡ್ಕ ಶಕ್ತಿ ಕೇಂದ್ರದ ಕೃಷಿ ಪತ್ತಿನ ಸಹಕಾರಿ ಸಂಘಗಳ ನಿರ್ದೇಶಕರು,ಹಾಲು ಉತ್ಪಾದಕ ಸಹಕಾರಿ ಸಂಘದ ನಿರ್ದೇಶಕರು,ಗ್ರಾಮ ಪಂಚಾಯತ್ ಸದಸ್ಯರು,ಬೂತ್ ಮಟ್ಟದ ಅಧ್ಯಕ್ಷರುಗಳು, ಕಾರ್ಯದರ್ಶಿ,ಪದಾಧಿಕಾರಿಗಳು ಸೇರಿದಂತೆ 100ಕ್ಕೂ ಮಿಕ್ಕಿ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.