ಕೊಯಿಲ ಶಾಲೆಯಲ್ಲಿ ಪ್ರಥಮ ಚಿಕಿತ್ಸಾ ಮಾಹಿತಿ ಕಾರ್ಯಾಗಾರ

0

ಬಡಗನ್ನೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಬ್ಯಾಂಕ್ ಆಫ್ ಬರೋಡ ಸಂಯೋಜಿತ ಸಂಸ್ಥೆ ವಿಜಯ ಗ್ರಾಮೀಣ ಅಭಿವೃದ್ಧಿ ಸಮಿತಿ ಬಡಗನ್ನೂರು ಘಟಕದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯಿಲ ಬಡಗನ್ನೂರು ಇದರ ಎಸ್ ಡಿಎಂಸಿ, ಪೋಷಕರು, ಹಿರಿಯ ವಿದ್ಯಾರ್ಥಿಗಳು ಮತ್ತು ಮಕ್ಕಳಿಗೆ ಅವಶ್ಯಕವಾಗಿ ಬೇಕಾದ ಪ್ರಥಮ ಚಿಕಿತ್ಸಾ ಕಾರ್ಯಾಗಾರ ನಡೆಯಿತು.

ಬ್ಯಾಂಕ್ ಆಫ್ ಬರೋಡ ಕುಂಬ್ರ ಶಾಖೆಯ ವ್ಯವಸ್ಥಾಪಕರಾದ ಲಕ್ಷ್ಮೀಪತಿರಾಜು ಮಾವಿನ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅತಿಥಿಗಳಾಗಿ ಗ್ರಾ.ಪಂ  ಉಪಾಧ್ಯಕ್ಷೆ ಸುಶೀಲ ವಿ.ಪಿ, ಸದಸ್ಯ ಸಂತೋಷ್ ಆಳ್ವ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಪಡುವನ್ನೂರು ಉಪಕೇಂದ್ರ ಸಿಎಚ್ ಒ ದಿವ್ಯಶ್ರೀ ಹಾಗೂ ಬಡಗನ್ನೂರು ಉಪಕೇಂದ್ರ ಪ್ರಜ್ಞಾ ಪ್ರಥಮ ಚಿಕಿತ್ಸಾ ಮಾಹಿತಿಯನ್ನು ವಿವಿಧ ಪ್ರಾತ್ಯಕ್ಷಿಕೆಗಳ  ಮೂಲಕ ವಿವರಿಸಿದರು. ವಿ ಆರ್ ಡಿ ಎಫ್ ಬಡಗನ್ನೂರು ಘಟಕದ ಸದಸ್ಯ ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ರೈ ಕೊಯಿಲ, ಎಸ್ ಡಿ ಎಂ ಸಿ ಅಧ್ಯಕ್ಷ  ವಸಂತ ಗೌಡ ಕೊಯಿಲ, ಉಪಾಧ್ಯಕ್ಷ ಸತೀಶ್ ಶುಭಹಾರೈಸಿದರು.

ಸಭೆಯಲ್ಲಿ ಆಶಾ ಕಾರ್ಯಕರ್ತರಾದ ಪುಷ್ಪಾವತಿ, ಸುಗಂಧಿ, ಸುಶೀಲ ,ಮತ್ತು ಎಸ್ ಡಿಎಂಸಿ ಸದಸ್ಯರು, ಪೋಷಕರು ಹಿರಿಯ ವಿದ್ಯಾರ್ಥಿಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಬಳಿಕ ಅತಿಥಿಗಳಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ಪುಷ್ಪಾವತಿ ಎಂ ಬಿ ಸ್ವಾಗತಿಸಿ, ಪಧವೀಧರ ಶಿಕ್ಷಕಿ ಸೌಮ್ಯ ವಂದಿಸಿದರು. ಸಹ ಶಿಕ್ಷಕ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here