ಪುತ್ತೂರು: ತಾಲೂಕು ದ.ಕ.ಜಿ.ಪ.ಉ.ಹಿ ಪ್ರಾಥಮಿಕ ಶಾಲೆ ದರ್ಬೆತ್ತಡ್ಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರ ಸಭೆ ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರ ಸಭೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಿಲ್ಲಾ ಸಮನ್ವಯ ವೇದಿಕೆಯ ವತಿಯಿಂದ ವತ್ಸಲಾ ನಾಯಕ್ ರವರು ಮಕ್ಕಳು ಮತ್ತು ಪೋಷಕರ ಜವಾಬ್ದಾರಿ ಮತ್ತು ಅವರ ಕರ್ತವ್ಯದ ಬಗ್ಗೆ ಮಕ್ಕಳು ಮತ್ತು ಪೋಷಕರಿಗೆ ಸವಿವರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮನ್ವಯ ವೇದಿಕೆಯಲ್ಲಿ ಜಿಲ್ಲಾ ಅಧ್ಯಕ್ಯ ಎಸ್.ಎಂ. ಇಸ್ಮಾಯಿಲ್ ನೆಲ್ಯಾಡಿ ಮಾತನಾಡಿ ಶಿಕ್ಷಕರು ಮತ್ತು ಎಸ್. ಡಿ .ಎಂ.ಸಿ ಜೊತೆಯಲ್ಲಿ ಅನ್ಯೊಂತೆಯಲ್ಲಿ ಕೆಲಸ ಮಾಡಿದಾಗ ಶಾಲೆಯ ಹೆಸರು ಯಾವುದಾದರೂ ಒಂದು ವಿಚಾರದಲ್ಲಿ ಶಾಲೆಯ ಮಕ್ಕಳ ಹೆಸರು ಮತ್ತು ಶಾಲೆಯ ಹೆಸರು ಮುಂಚೂಣಿಯಲ್ಲಿ ಇರುತ್ತದೆ ಎಂದು ತಿಳಿಸಿದರು ಎಸ್ ಡಿ ಎಂ ಸಿ ಜಿಲ್ಲಾ ಸಮನ್ವಯ ವೇದಿಕೆ ಉಪಾಧ್ಯಕ್ಷ ಪ್ರವೀಣ್ ಆಚಾರ್ಯ ಮಾತನಾಡಿ ಶಿಕ್ಷಕರು ಮತ್ತು ಮಕ್ಕಳು ತಾಯಿ ತಂದೆ ಸ್ಥಾನದಲ್ಲಿ ನಿಂತು ಬೆರೆತಾಗ ಮಕ್ಕಳಿಗೆ ಶಾಲೆಯಲ್ಲಿ ಮನೆಯ ವಾತಾವರಣ ಸೃಷ್ಟಿ ಆಗುತ್ತೆ ಅದು ಈ ಶಾಲೆಯಲ್ಲಿ ನಾವು ನೋಡಿದ್ದೇವೆ. ಬೇರೆ ಸರಕಾರಿ ಶಾಲೆಗಳಿಗೆ ದರ್ಬೇತಡ್ಕ ಶಾಲೆ ಮಾದರಿ ಶಾಲೆಯಾಗಲಿ ನೆರೆ ಹೊರೆಯ ಸಮಾನ ಶಾಲೆಗಳು ಆಗಲಿ ಅಂತ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಪನ್ಮೂಲ ತರಬೇತಿಗಾರದ ವತ್ಸಲಾ ನಾಯಕ್ ಅವರು ಮಕ್ಕಳಿಗೆ ಮತ್ತು ಶಿಕ್ಷಕ ಪೋಷಕರಿಗೆ ತರಬೇತಿ ನೀಡಿ ಮಕ್ಕಳಿಗೆ ಆಗುವ ಸಮಗ್ರ ಸಮಸ್ಯೆಯ ಬಗ್ಗೆ ಅರಿವು ಮೂಡಿಸಿ ಪೋಷಕರ ಜೊತೆ ಮುಕ್ತ ಮಾತುಕಧೆ ನಡೆಸಿ ಜಿಲ್ಲಾ ಸಮನ್ವಯ ವೇದಿಕೆ ಮತ್ತು ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ಜೊತೆ ನಿರಂತರ ಸಂಪರ್ಕ. ಬೆಳೆಸಿ ಸರಕಾರಿ ಶಾಲೆಯ ಮಕ್ಕಳ ಜೊತೆ ಸಹಕರಿಸಿ ಸರಕಾರಿ ಶಾಲೆಯ ಅಭಿವೃದ್ಧಿ ಖಾಸಗಿ ಶಾಲೆಗಳಿಗೆ ಈ ಶಾಲೆ ಮಾದರಿ ಆಗಲಿ ಅಂತ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸರಕಾರಿ ಶಾಲೆ ಉಳಿಯಲಿ ಬೆಳೆಯಲಿ ನೆರೆ ಹೊರೆಯ ಶಾಲೆಗೆ ಸಮಾನ ಶಾಲೆಯಾಗಲಿ ಎನ್ನುವ ಮಾತನ್ನು ನಿಜ ಮಾಡಿದ ಓರ್ವ ವಿದ್ಯಾಭಿಮಾನಿ ಸಂತೋಷ್ ಆಚಾರ್ಯ ಚೆಲ್ಯಡ್ಕ ರವರನ್ನು ಶಾಲಾ ಎಸ್. ಡಿ ಎಂ ಸಿ ಮತ್ತು ಜಿಲ್ಲಾ ಸಮನ್ವಯ ವೇದಿಕೆ ಇವರ ಬಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮೂಹ ಸಂಪನ್ಮೂಲ ತರಬೇತು ಗಾರರಾಗಿ ಆಗಮಿಸಿದ ವತ್ಸಲಾ ನಾಯಕ್ ಸಭಾ ಅಧ್ಯಕ್ಷರಾಗಿ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತೂರು, ಗೌರವ ಉಪಸ್ಥಿತಿ ರಾಜ್ಯ ಎಸ್. ಡಿ ಎಂ ಸಿ ಸಮನ್ವಯ ವೇದಿಕೆ ಕಾರ್ಯದರ್ಶಿ ಜಿಲ್ಲಾ ಅಧ್ಯಕ್ಷ ಎಸ್ ಎಂ ಇಸ್ಮಾಯಿಲ್ ನೆಲ್ಯಾಡಿ ಮತ್ತು ಜಿಲ್ಲಾ ಸಮನ್ವಯ ವೇದಿಕೆ ಉಪಾಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ಒಳಮೊಗ್ರು ಪಂಚಾಯತ್ ಸದಸ್ಯರು ಶಾರದಾ ಮತ್ತು ರೇಖಾ ಬಿಜಾತ್ರೆ ಬಾಲಕೃಷ್ಣ ರೈ ಶಿಕ್ಷಣ ತಜ್ಞ, ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘ ವಸಂತ ಶೆಟ್ಟಿ ಕಲ್ಮಡ್ಕ, ಶುಭಕರ ನಾಯ್ಕ ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ದರ್ಬೇತಡ್ಕ ರಾಜೇಶ್ವರಿ ಉಪಾಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ದರ್ಬೇತಡ್ಕ ಮತ್ತು ಶಾಲಾ ಶಿಕ್ಷಕ ವೃಂದ ಮತ್ತು ಪೋಷಕರು ಉಪಸ್ಥಿತರಿದ್ದರು. ಶಿಕ್ಷಕ ದಯಾನಂದ ನಿರೂಪಿಸಿದರು. ರಮ್ಯಾ ಸ್ವಾಗತಿಸಿದರು. ಶಾಲಾ ಶಿಕ್ಷಕಿ ರಮ್ಯಾ ಧನ್ಯವಾದಗೈದರು.