ಒಡಿಯೂರು ಸಂಸ್ಥಾನದಲ್ಲಿ ಅಂತರ್ ಕಾಲೇಜು ವಿದ್ಯಾರ್ಥಿಗಳ ತುಳು ನಾಟಕ ಸ್ಪರ್ಧೆಗೆ ಚಾಲನೆ

0

ಜೀವನ ನಾಟಕದ ಸೂತ್ರಧಾರ ಭಗವಂತ: ಒಡಿಯೂರು ಶ್ರೀ

ವಿಟ್ಲ:  ಬದುಕಿನ‌ ನಾಟಕದಲ್ಲಿ ವಿಜಯಿಗಳಾಗಬೇಕು. ರಂಗಭೂಮಿ ಎನ್ನುವ ಶಬ್ದ ಬಹಳಷ್ಟು ಶ್ರೇಷ್ಟವಾದುದು. ನಾವೆಲ್ಲರೂ ಒಂದೊಂದು ಕಲಾವಿದರು. ನಮ್ಮ ನಮ್ಮ ಪಾತ್ರವನ್ನು ನಾವು ಚೆನ್ನಾಗಿ ನಿಭಾಯಿಸಬೇಕಿದೆ. ಜೀವನ ನಾಟಕದ ಸೂತ್ರಧಾರ ಭಗವಂತ. ಸೂತ್ರದಾರನನ್ನು ನೆನಸದಿದ್ದರೆ ಜೀವನ ಹಸನಾಗದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು. 

ಅವರು ಸಂಸ್ಥಾನದಲ್ಲಿ ಆ.6ರಂದು ನಡೆದ ಅಂತರ್ ಕಾಲೇಜು ವಿದ್ಯಾರ್ಥಿಗಳ ತುಳು ನಾಟಕ ಸ್ಪರ್ಧೆಯನ್ನು‌ ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಲಾವಿದ ನಟನೆ‌ ಕೌಶಲ್ಯದಿಂದ ಕೂಡಿರಬೇಕು‌. ಕಲಾವಿದನ‌ ಮನಸ್ಸು ಬಹಳಷ್ಟು ದೊಡ್ಡದು. ಕರಾವಳಿಯಲ್ಲಿ ಕಲಾವಿದರಿಗೆ ಕಡಿಮೆ ಇಲ್ಲ. ನಾಟಕಗಳಲ್ಲಿಯೂ ಆವಿಷ್ಕಾರಗಳಿರಬೇಕು. ದೇವರನ್ನು ಮರೆತ ರಂಗಭೂಮಿಗೂ ಬಲವಿಲ್ಲ.  ತಂತ್ರಜ್ಞಾನದಿಂದ ಅಪಾಯ, ಅನುಕೂಲ ಎರಡೂ ಇದೆ. ಎಚ್ಚರದ ಬದುಕು ನಮ್ಮದಾಗಬೇಕು ಎಂದರು.

ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ತೀರ್ಪುಗಾರರಾದ ಶಶಿರಾಜ್ ರಾವ್ ಕಾವೂರು, ಮಂಜುಳಾ ಜನಾರ್ದನ, ರಾಘವ ಸೂರಿ, ಒಡಿಯೂರು ಶ್ರೀ  ವಿವಿದೋದ್ದೇಶ ಸೌಹಾರ್ದ ಸಂಘದ ಅಧ್ಯಕ್ಷರಾದ ಎ. ಸುರೇಶ್ ರೈ, ಜನ್ಮದಿನೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಪನೆಯಡ್ಕ ಲಿಂಗಪ್ಪ ಗೌಡ, ಕೃಷ್ಣ ಶೆಟ್ಟಿ ತಾರೆಮಾರ್, ಕೋಶಾಧಿಕಾರಿ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು. ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕದ್ರಿ ನವನೀತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಂತೇಶ್ ಭಂಡಾರಿ ವಂದಿಸಿದರು.‌ ವಾರುಣೀ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. 

LEAVE A REPLY

Please enter your comment!
Please enter your name here