ಬಡಗನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ (ರಿ ) ಪುತ್ತೂರು, ಕರ್ನೂರು ಒಕ್ಕೂಟದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಆಶಾಲತಾ ರೈ ಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೖೆಸಿದರು. ತಾಲೂಕು ಯೋಜನಾಧಿಕಾರಿ ಶಶಿಧರ್ ರವರು ಹಿಂಗಾರವನ್ನು ಅರಳಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಭಿವೃದ್ಧಿ ಒಂದು ಪ್ರೇರಣಾ ಶಕ್ತಿ ಮತ್ತು ದುರ್ಬಲ ವರ್ಗದ ಜನರನ್ನು ಸಮಾಜದಲ್ಲಿ ಮುಖ್ಯವಾಹಿನಿ ತರುವ ಮಹತ್ವ ಕಾರ್ಯವನ್ನು ಪೂಜ್ಯರು ಹಾಕಿಕೊಂಡಿದ್ದಾರೆ. ಗ್ರಾಮಭಿವೃದ್ಧಿ ಯೋಜನೆ ಬಂದ ನಂತರ ತುಳುಕೂಟ, ಆಟಿ ಕೂಟ, ಸರಕಾರಿ ಸೌಲಭ್ಯಗಳ ಮಾಹಿತಿ ಕೃಷಿ ಮಾಹಿತಿ ಇತ್ಯಾದಿ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಆರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.

ಸುರುಳಿಮೂಲೆ ಪ್ರೌಢ ಶಾಲಾ ಶಿಕ್ಷಕಿ ಮೀನಾಕ್ಷಿ ಆಟಿ ತಿಂಗಳ ವಿಶೇಷ ಖಾದ್ಯಗಳು ಮತ್ತು ಮನೋರಂಜನೆಯ ಆಟಗಳು ಇದರ ಬಗ್ಗೆ ತಿಳಿಸಿದರು. ಒಕ್ಕೂಟದ ಉಪಾಧ್ಯಕ್ಷರಾದ ಸುಬ್ಬಣ್ಣ ರೈ ರವರು ಮಾತನಾಡಿ, ಕಳೆದ 22 ವರ್ಷಗಳಿಂದ ಗ್ರಾಮಭಿವೃದ್ಧಿ ಯೋಜನೆಯಲ್ಲಿ ಪ್ರಗತಿ ಬಂಧು ತಂಡದ ಮೂಲಕ ಸಾಲ ಸೌಲಭ್ಯ ಮಾಹಿತಿ ಕಾರ್ಯಕ್ರಮವನ್ನು ಪಡೆದುಕೊಂಡು ತಮ್ಮ ವೖೆಯತ್ತಿಕ ಅಭಿವೃದ್ಧಿ ಅನುಭವನ್ನು ಹಂಚಿಕೊಂಡರು. ವೇದಿಕೆಯಲ್ಲಿ ವಲಯ ಮೇಲ್ವಿಚಾರಕರಾದ ಹರೀಶ್ ಕುಲಾಲ್ ಅರಿಯಡ್ಕ, ವಲಯಧ್ಯಕ್ಷರಾದ ದಿನೇಶ್ ರೈ ಈಶ್ವರಮಂಗಲ, ಸೇವಾಪ್ರತಿನಿಧಿ ಗಾಯತ್ರಿ ಕೆ ಎಸ್, ಹಾಗೂ ನಮ್ಮ ಸೇವಾಕೇಂದ್ರದ vle ಸಂದ್ಯಾ ಪದಾಧಿಕಾರಿಗಳಾದ ಪ್ರಮೀಳಾ ರೈ ಹಾಗೂ ವೀಣಾ ಕರ್ನೂರು ಹಾಗೂ ಒಕ್ಕೂಟ ಸದಸ್ಯರು ಉಪಸ್ಥಿತರಿದ್ದರು.
ಒಕ್ಕೂಟದ ಸದಸ್ಯರು ಸುಮಾರು 28 ಬಗೆಯ ವಿವಿಧ ಖಾದ್ಯಗಳನ್ನು ಮನೆಯಲ್ಲಿಯೇ ತಯಾರಿಸಿ ತಂದಿದ್ದು ಅತಿಥಿ ಅಭ್ಯಾಗತರು ಮತ್ತು ಎಲ್ಲರು ಇದರ ಸವಿ ಉಂಡರು.
ಒಕ್ಕೂಟದ ಸದಸ್ಯ ಜಯಂತ ರೈ ಸ್ವಾಗತಿಸಿ, ಸೇವಾಪ್ರತಿನಿಧಿ ಕುಸುಮ ರೈ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.