ಪುತ್ತೂರು: ಕೌಟುಂಬಿಕ ಮೌಲ್ಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಆಟಿಕೂಟದಂಥ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಇಲ್ಲಿ ಒಟ್ಟಾಗಿ ಕಳೆಯುವ ಮೂಲಕ ನಾವು ನಮ್ಮೊಳಗಿನ ಐಕ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲೂ ಇದೇ ಮಾದರಿಯಲ್ಲಿ ಏಕತೆ ಮತ್ತು ಸಂತೋಷಕ್ಕಾಗಿ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪುತ್ತೂರು ದೇವಾಂಗ ಸೇವಾ ಸಮಾಜದ ಅಧ್ಯಕ್ಷ ಕೆ. ದಿವಾಕರ ಶೆಟ್ಟಿ ಕುಂಬ್ರ ಹೇಳಿದರು.
ಸಂಘದ ವತಿಯಿಂದ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಆ.10ರಂದು ನಡೆದ ಆಟಿ ಕೂಟ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು. ಸಂಘದ ಚಟುವಟಿಕೆಗಳಲ್ಲಿ ಯುವಕ, ಯುವತಿಯರು ಹೆಚ್ಚು ಉತ್ಸಾಹದಿಂದ ಭಾಗವಹಿಸಬೇಕು ಎಂದವರು ಮನವಿ ಮಾಡಿದರು.
ನರಿಮೊಗರು ಪಿಡಿಒ ರವಿಚಂದ್ರ ಮುಖ್ಯ ಅತಿಥಿಗಳಾಗಿದ್ದು ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷ ನರೆಶ್, ಕಾರ್ಯದರ್ಶಿ ಶಿಥಿಲ್, ಸದಸ್ಯೆ ಸುನಿತಾ ರವೀಂದ್ರ, ವಿದ್ಯಾ ಗಿರಿಧರ್, ಹಿರಿಯರಾದ ಕಾತ್ಯಾಯಿನಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮನರಂಜನಾ ಕಾರ್ಯಕ್ರಮ ಮತ್ತು ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಿರ್ಮಲಾ ಪ್ರಾರ್ಥಿಸಿದರು, ಪ್ರಭಾ ಟೀಚರ್ ಮುರ ಸ್ವಾಗತಿಸಿದರು. ವೈಶಾಲಿ ಕಾರ್ಯಕ್ರಮ ನಿರ್ವಹಿಸಿದರು. ಆಶ್ರಿತಾ ನರೇಶ್ ವಂದಿಸಿದರು.