ಪುತ್ತೂರು: ಸ್ನೇಹಸಂಗಮ ಆಟೋ ಚಾಲಕ ಮತ್ತು ಮಾಲಕರ ಸಂಘ ಪುತ್ತೂರು(ರಿ) ಇದರ ತುರ್ತುಸೇವಾ ನಿಧಿಯಿಂದ ಸಂಘದ ಹಿರಿಯ ಸದಸ್ಯರಾದ ವಿಠಲ್ ಪೂಜಾರಿ ಕರ್ಕುಂಜರವರಿಗೆ ರೂ. 10,000 ಧನಸಹಾಯ ನೀಡಲಾಯಿತು.
ಸ್ನೇಹಸಂಗಮ ಆಟೋ ಚಾಲಕ ಮತ್ತು ಮಾಲಕರ ಸಂಘದ ಸದಸ್ಯರು ಪ್ರತಿ ತಿಂಗಳು ನೂರು ರೂಪಾಯಿ ಸಂಗ್ರಹಗೊಳಿಸಿ ಬಡ ಆಟೋರಿಕ್ಷಾ ಚಾಲಕರ ತುರ್ತುಸೇವಾ ನಿಧಿಗಾಗಿ ಇದನ್ನು ಮೀಸಲಿರಿಸಲಾಗಿದೆ. ಇದಕ್ಕೆ ಒಳಪಟ್ಟ ಸದಸ್ಯರು ಅನಾರೋಗ್ಯದ ತುರ್ತುಸೇವೆ/ ಅಪಘಾತಕ್ಕೆ / ಶಸ್ತ್ರಚಿಕಿತ್ಸೆಗೆ ಒಳಗಾದಾಗ ಈ ನಿಧಿಯಿಂದ ನೆರವು ನೀಡಲಾಗುತ್ತದೆ. ಸಂಘದ ಅಧ್ಯಕ್ಷ ತಾರಾನಾಥ ಗೌಡ ಬನ್ನೂರು, ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಕಾರ್ಯಾಧ್ಯಕ್ಷ ತನಿಯಪ್ಪ ನಾಯ್ಕ ಇರ್ದೆ, ಉಪಾಧ್ಯಕ್ಷ ಶಶಿಧರ್ ಸಿಟಿಗುಡ್ಡೆ, ಸಂಚಾಲಕರಾದ ಇಸ್ಮಾಯಿಲ್ ಬೊಳುವಾರು, ಹಾಗೂ ಅರವಿಂದ್ ಪೆರಿಗೇರಿ, ಕೋಶಾಧಿಕಾರಿ ಸಿಲ್ವೆಸ್ಟರ್ ಡಿಸೋಜ, ಮೊಹಮ್ಮದ್ ರಫೀಕ್ ಸಂಪ್ಯ ಹಾಗೂ ಮಹಮ್ಮದ್ ಸಿದ್ದಿಕ್ ಮಡಿಕೇರಿ ಉಪಸ್ಥಿತರಿದ್ದರು.