ರಾಷ್ಟ್ರದ ಸ್ವಾತಂತ್ರ್ಯ ಸೇನಾನಿಗಳನ್ನು ಸ್ಮರಿಸಿ, ಅವರ ಆದರ್ಶ ಪಾಲನೆಯನ್ನು ಮಾಡಲು ನ್ಯಾಯಾಧೀಶೆ ಪ್ರಕೃತಿ ಕಲ್ಯಾಣ್ ಪುರ್ ಕರೆ

0

ಪುತ್ತೂರು: ಬ್ರಿಟಿಷರ ಹಿಡಿತದಿಂದ ಭಾರತವನ್ನು ಪಾರು ಮಾಡಲು ಹೋರಾಡಿ ಹುತಾತ್ಮರಾದ, ಸ್ವಾತಂತ್ರ ಸೇನಾನಿಗಳನ್ನು ಸ್ಮರಿಸುವುದರೊಂದಿಗೆ, ಅವರ ಆದರ್ಶವನ್ನು ಪಾಲನೆ ಮಾಡಲು ಪುತ್ತೂರು ಪ್ರಧಾನ ಸಿವಿಲ್ ಹಿರಿಯ ನ್ಯಾಯಾಧೀಶೆ ಶ್ರೀಮತಿ ಪ್ರಕೃತಿ ಕಲ್ಯಾಣ್ ಪುರ್ ಕರೆ ನೀಡಿದರು. ಅವರು ಪುತ್ತೂರು ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ 79ನೇ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣಗೈದು, ಸ್ವಾತಂತ್ರ ಸಂದೇಶವನ್ನು ನೀಡಿದರು.

ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ಜಗನ್ನಾಥ್ ರೈ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆದು, ಈ ಕಾರ್ಯಕ್ರಮದಲ್ಲಿ, ಹೆಚ್ಚುವರಿ ಸಿವಿಲ್ ಹಿರಿಯ ನ್ಯಾಯಾಧೀಶ ದೇವರಾಜ್, ಹಿರಿಯ ನ್ಯಾಯವಾದಿ ಶ್ರೀರಾಮ್ ಮೋಹನ್ ರಾವ್, ಜಗನ್ನಿವಾಸ್ ರಾವ್, ಶ್ರೀ ಮಹೇಶ್ ಕಜೆ ಮಾತನಾಡಿದರು.

ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಧೀಶರಾದ ಯೋಗೇಂದ್ರ ಶೆಟ್ಟಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿವಣ್ಣ, ಪುತ್ತೂರು ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಮನೋಹರ ಕೆವಿ. ನ್ಯಾಯವಾದಿಗಳಾದ ಎಂಜಿ ಗೋಪಾಲಕೃಷ್ಣ ಭಟ್, ಈಶ್ವರ ಭಟ್, ಶಿವಪ್ರಸಾದ್, ಉದಯ್ ಕುಮಾರ್ ಶೆಟ್ಟಿ, ದೇವಾನಂದ,ಶ್ರೀ ನಾಗರಾಜ್ ನೂರುದ್ದೀನ್ ಸಾಲ್ಮರ, ಕೃಷ್ಣವೇಣಿ, ಪ್ರವೀಣ್ ಕುಮಾರ್, ಸಿದ್ದೀಕ್, ಮಾಧವ ಪೂಜಾರಿ ಇನ್ನಿತರ ನ್ಯಾಯವಾದಿಗಳು, ಸರಕಾರಿ ಅಭಿಯೋಜಕರುಗಳು, ನ್ಯಾಯಾಲಯದ ಸಿಬ್ಬಂದಿಗಳು ಮೊದಲಾದವರು ಹಾಜರಿದ್ದರು.

ಪುತ್ತೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ ಸ್ವಾಗತಿಸಿ, ಕೋಶಾಧಿಕಾರಿ ಮಹೇಶ್ ಕೆ ಸವಣೂರು ವಂದಿಸಿದರು. ಪುತ್ತೂರು ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ನಿರೀಕ್ಷಕರಾದ ರಾಮಕೃಷ್ಣ ಕೆ ರವರ ನೇತೃತ್ವದಲ್ಲಿ ಪೋಲಿಸ್ ಪರೇಡ್ ನಡೆಸಲಾಯಿತು.

LEAVE A REPLY

Please enter your comment!
Please enter your name here