ಕಾವು : ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು ಇಲ್ಲಿ 79 ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಧ್ವಜಾರೋಣಗೈದು 79 ನೇ ಸ್ವಾತಂತ್ರ ದಿನಾಚರಣೆಯ ಶುಭ ಹಾರೈಸಿದರು.ನಿವೃತ್ತ ಹವಾಲ್ದಾರ್ ನಾರಾಯಣ ಗೌಡ ಕುಂಬ್ರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಬಳಿಕ ವಿದ್ಯಾರ್ಥಿ ಶಾಲೆಯಿಂದ ಕಾವು ಮಾರ್ಗವಾಗಿ ಪಥಸಂಚಲನ ನೆರವೇರಿಸಿದರು.ನಂತರ ಮತ್ತೆ ಶಾಲಾ ಆಡಿಟೋರಿಯಂ ನಲ್ಲಿ ಸಭೆ ಸೇರಿ,ನಿವೃತ್ತ ಹವಾಲ್ದಾರ್ ನಾರಾಯಣ ಗೌಡ ಇವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಕಲಂದರ್ ಶಾಫಿ, HR ಮ್ಯಾನೇಜರ್ ಮಣಿಪಾಲ್ ಸಮೂಹ ಸಂಸ್ಥೆ ಇವರು ಮುಖ್ಯ ಶುಭ ಹಾರೈಸಿದರು.
ಸಭೆಯಲ್ಲಿ ಅಧ್ಯಕ್ಷ ಜನಾಬ್ ಅಬ್ದುಲ್ ಆಝೀಜ್, ಸಂಸ್ಥೆಯ ಮುಖ್ಯ ಶಿಕ್ಷಕಿ ದೀಪಿಕಾ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ ಮತ್ತು ಅಕ್ಷತಾ ಚಂದ್ರಶೇಖರ ಬಲ್ಯಾಯ, ಖಜಾಂಜಿ ರವಿರಾಜ್ ಬೋರ್ಕರ್ ಸದಸ್ಯರಾದ ರವಿಪ್ರಸಾದ್ ರೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಸಂಸ್ಥೆಯ ಹಿತ ರಕ್ಷಕ ಸುರೇಶ ಆಳ್ವ, ಮೋಹನ್ ಆಳ್ವ, ಆಝೀಜ್ ಸಿ. ಹೆಚ್, ಒಮೆಗಾ ಮಹಮ್ಮದ್ ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯ ಶಿಕ್ಷಕಿ ದೀಪಿಕಾ ಪ್ರಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ತ್ರಿವೇಣಿ ವಂದಿಸಿದರು. ಶಿಕ್ಷಕಿ ಹೇಮಲತಾ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿದರು.