ಬಂಡಾಜೆ ಅಂಗನವಾಡಿ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

0

ಕಾಣಿಯೂರು: ಬಂಡಾಜೆ ಅಂಗನವಾಡಿ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯ
ರಾಮಣ್ಣ ಗೌಡ ಮುಗರಂಜರವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಸವಿತಾ, ನಿವೃತ್ತ ಶಿಕ್ಷಕ ಜಯರಾಮ ಗೌಡ ಬಂಡಾಜೆ, ಹರಿಯಪ್ಪ ಗೌಡ ನಾವೂರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕರ್ತೆ ಸುಮಿತ್ರಾ ರವಿ ಸ್ವಾಗತಿಸಿ, ಉಮೇಶ್ ಬಂಡಾಜೆ ವಂದಿಸಿದರು. ಸಹಾಯಕಿ ದೇಜಮ್ಮ ಸಹಕರಿಸಿದರು.

LEAVE A REPLY

Please enter your comment!
Please enter your name here