ಆಲಂಕಾರು: ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ 79 ನೇ ವರ್ಷದ ಸ್ವಾತಂತ್ರೋತ್ಸವನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ಯವರು ದ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನೂತನವಾಗಿ ಖರೀದಿಸಿದ ಬ್ಯಾಂಡ್ ಸೆಟ್ ನ್ನು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ್ ಭಟ್ ಉಪ್ಪಂಗಳ ರವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಈಶ್ವರ ಗೌಡ ಪಜ್ಜಡ್ಕ, ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪದ್ಮಪ್ಪ ಗೌಡ , ಅಶೋಕ್ ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಾದ ಮುತ್ತಪ್ಪ ಪೂಜಾರಿ ನೆಯ್ಯಲ್ಗ, ವಿಜಯಕುಮಾರ್ ರೈ ಮನವಳಿಕೆ, ಇಂದುಶೇಖರ ಶೆಟ್ಟಿ, ದಯಾನಂದ ಗೌಡ ಆಲಡ್ಕ, ಸರೋಜಾ ಉಮೇಶ್ ರೈ ಮನವಳಿಕೆ , ನಿವೃತ್ತ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ ಮನವಳಿಕೆ, ಆಡಳಿತ ಅಧಿಕಾರಿ ಶ್ರೀಪತಿ ರಾವ್ ಎಚ್, ಪ್ರಾಂಶುಪಾಲರಾದ ರೂಪ ಎಂ ಟಿ, ಮುಖ್ಯ ಗುರುಗಳಾದ ನವೀನ್ ರೈ, ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.