ಆ.18:ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ತಾ|ಘಟಕದಿಂದ ಸೀತಾ ಪರಿತ್ಯಾಗ ಕನಕಾಂಗಿ ಕಲ್ಯಾಣ ಯಕ್ಷಗಾನ

0

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣಗಳ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಯಕ್ಷಕಲಾ ಕೇಂದ್ರ(ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರ), ರಕ್ಷಕ-ಶಿಕ್ಷಕ ಸಂಘ, ಹಿರಿಯ ವಿದ್ಯಾರ್ಥಿ ಸಂಘ, ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಆಶ್ರಯದಲ್ಲಿ ಆ.18 ರಂದು “ಸೀತಾ ಪರಿತ್ಯಾಗ ಕನಕಾಂಗಿ ಕಲ್ಯಾಣ” ಯಕ್ಷಗಾನ ಪ್ರಸಂಗವು ಕಾಲೇಜಿನ ಸಭಾಂಗಣದಲ್ಲಿ ಜರಗಲಿದೆ.


ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಪ್ರಸ್ತುತಿಯಿಂದ ನಡೆಯಲ್ಪಡುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಯಿದೆ ದೇವುಸ್ ಸಮೂಹ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಅಧ್ಯಕ್ಷ ಕರುಣಾಕರ್ ರೈ ದೇರ್ಲ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಮಾತೃ ಘಟಕದ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಪೂರ್ವಾಧ್ಯಕ್ಷ ಜೈರಾಜ್ ಭಂಡಾರಿರವರು ಉಪಸ್ಥಿತಲಿರುವರು.

ಅತಿಥಿ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ:
ಈ ಯಕ್ಷಗಾನ ಪ್ರಸಂಗದಲ್ಲಿ ಅತಿಥಿ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿಯವರ ಜೊತೆಗೆ ಪ್ರಶಾಂತ್ ರೈ ಮುಂಡಾಳಗುತ್ತುರವರು ಭಾಗವಹಿಸಲಿದ್ದು ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು ಹಾಗೂ ದೇವರಾಜ್ ಆಚಾರ್ಯ, ಚಂದ್ರಶೇಖರ ಸರಪಾಡಿ(ಚೆಂಡೆ), ಶ್ರೀಧರ ವಿಟ್ಲ(ಮದ್ದಳೆ), ಮಹೇಶ್ ಮಣಿಯಾಣಿ(ಹಾಸ್ಯ), ಪ್ರಶಾಂತ್ ನೆಲ್ಯಾಡಿ, ಸತೀಶ್ ನೀರ್ಕರೆ, ಚರಣ್(ಸ್ತ್ರೀ ವೇಷ), ಮುಮ್ಮೇಳದಲ್ಲಿ ವಸಂತ್ ಗೌಡ ಕಾಯರ್ತಡ್ಕ, ಸದಾಶಿವ ಆಚಾರ್ಯ ವೇಣೂರು, ಚಂದ್ರಶೇಖರ ಧರ್ಮಸ್ಥಳ, ಮೋಹನ್ ಬೆಳ್ಳಿಪ್ಪಾಡಿ, ಹರೀಶ್ ಶೆಟ್ಟಿ ಮಣ್ಣಾಪು, ಬಾಲಕೃಷ್ಣ ಗೌಡ ಮಿಜಾರು, ಗಣೇಶ್ ಶೆಟ್ಟಿ ಅರಳ, ಶಿವಾನಂದ ಬಜಕೂಡ್ಲು, ಶಿವರಾಜ್ ಬಜಕೂಡ್ಲು, ಸತೀಶ್ ಎಡಮೊಗೆ, ಭವಿಷ್ ಭಂಡಾರಿರವರು ಸಹಕರಿಸಲಿದ್ದಾರೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಕುಂಞ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರತಿಮಾ ಹೆಗ್ಡೆರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here