ಕಡಬ: ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ಕಡಬ ಪಟ್ಟಣ ಪಂಚಾಯತ್ನ 13 ವಾರ್ಡ್ಗಳಿಗೆ ಇಂದು (ಆ.17) ಚುನಾವಣೆ ನಡೆಯುತ್ತಿದ್ದು ಹಿರಿಯ ನಾಗರೀಕರು, ಅಂಗವಿಕಲರೂ ಆಗಿರುವ ಕಡಬ ಗ್ರಾಮದ ಪಿಜಕ್ಕಳ ಕೋಂಕ್ಯಾಡಿ ನಿವಾಸಿ ಶ್ರೀಮತಿ ಜಾನಕಿಶೀನಪ್ಪ ಗೌಡ(75ವ.)ರವರು ಪುತ್ರ ಆನಂದ ಗೌಡರವರ ಸಹಾಯದೊಂದಿಗೆ ಕಡಬ ಪಿಜಕ್ಕಳ ಸರಕಾರಿ ಕಿ.ಪ್ರಾ.ಶಾಲೆಯಲ್ಲಿನ ಮತಗಟ್ಟೆಗೆ ಗಾಲಿ ಕುರ್ಚಿಯಲ್ಲಿ ಬಂದು ಮತದಾನ ಮಾಡಿದರು.