ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ “ಶ್ರೀಕೃಷ್ಣ ಲೀಲೆ 2025-26” ಕಾರ್ಯಕ್ರಮ 

0

ಬಡಗನ್ನೂರು: ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು, ಪಟ್ಟೆ ಇದರ ಆಶ್ರಯದಲ್ಲಿ ಹಾಗೂ ಎಸ್.ಕೆ. ಫ್ರೆಂಡ್ಸ್ ಮುಡಿಪಿನಡ್ಕ ಶ್ರೀಕೃಷ್ಣ ಯುವಕಮಂಡಲ ಪಟ್ಟೆ ಶ್ರೀಕೃಷ್ಣ ಹಿರಿಯ ವಿದ್ಯಾರ್ಥಿ ಸಂಘ ಪಟ್ಟೆ ಶ್ರೀಕೃಷ್ಣ ಭಜನಾ ಮಂಡಳಿ ಮುಡಿಪಿನಡ್ಕ ಅಯ್ಯಪ್ಪ ಭಜನಾ ಮಂಡಳಿ ಪೆರಿಗೇರಿ ನವಚೈತನ್ಯ ಯುವಕಮಂಡಲ ಪೆರಿಗೇರಿ ಇವುಗಳ ಸಹಯೋಗದೊಂದಿಗೆ ಪ್ರಪ್ರಥಮ ಬಾರಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ “ಶ್ರೀಕೃಷ್ಣ ಲೀಲೆ 2025-26” ಕಾರ್ಯಕ್ರಮ ಆ. 16 ರಂದು ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ನಡೆಯಿತು.

ಶ್ರೀಕೃಷ್ಣಸ್ತುತಿ” ಭಜನಾ ಕಾರ್ಯಕ್ರಮ:
ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಪ್ರಾಕ್ತನ ಅಧ್ಯಕ್ಷ ಪಿ. ವೇಣುಗೋಪಾಲ ಭಟ್ ಶ್ರೀಕೃಷ್ಣಸ್ತುತಿ” ಭಜನಾ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೖೆಸಿದರು. ಬಳಿಕ ಸರ್ವಶಕ್ತಿ ಮಹಿಳಾ ಭಜನಾ ಮಂಡಳಿ ಪಡುಮಲೆ, ಆದಿಶಕ್ತಿ ಮಹಿಳಾ ಭಜನಾ ಮಂಡಳಿ ಪಟ್ಟೆ ಪಡುಮಲೆ, ಅಯ್ಯಪ್ಪ ಮಹಿಳಾ ಭಜನಾ ಮಂಡಳಿ ಪೆರಿಗೇರಿ, ಶ್ರೀ ವರಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ ಪಡುಮಲೆ, ಶ್ರೀಕೃಷ್ಣ ಮಹಿಳಾ ಭಜನಾ ಮಂಡಳಿ ಮುಡಿಪಿನಡ್ಕ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

“ಶ್ರೀಕೃಷ್ಣ ವೇಷ ಸ್ಪರ್ಧೆ”
3ರಿಂದ 6, ವಯೋಮಾನ ಮಕ್ಕಳಿಗೆ ಮುದ್ದು ಕೃಷ್ಣ, ಹಾಗೂ 6ರಿಂದ 10 ವಯೋಮಾನ ಮಕ್ಕಳಿಗೆ ಬಾಲಕೃಷ್ಣ / ರಾಧಾಕೃಷ್ಣ  ಸ್ಪರ್ಧೆ ನಡೆಯಿತು.5ನೇ ತರಗತಿಯಿಂದ 7ನೇ ತರಗತಿ ವರೆಗೆ, ಮತ್ತು 8 ನೇ ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ “ಮೊಸರು ಕುಡಿಕೆ ಸ್ಪರ್ಧೆ” ನಡೆಯಿತು. ಮತ್ತು ಸಾರ್ವಜನಿಕ ಪುರುಷರಿಗೆ ವಾಲಿಬಾಲ್ ಪಂದ್ಯಾಟ ಅಯೋಜಿಸಲಾಗಿತ್ತು.  ಪಂದ್ಯಾಟವನ್ನು ಮುಡಿಪಿನಡ್ಕ ಶ್ರೀಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ಜಯಪ್ರಕಾಶ್ ಆಚಾರ್ಯ ಕುಡ್ಡಿಲ ಚಾಲನೆ ನೀಡಿ ಶುಭ ಹಾರೖೆಸಿದರು.ಮಹಿಳೆಯರ ಹಗ್ಗಜಗ್ಗಾಟ ಪಂದ್ಯಟವನ್ನು ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಗುರುಗಳಾದ ಯಮುನ ಕೆ.ಚಾಲನೆ ನೀಡಿ ಶುಭ ಹಾರೖೆಸಿದರು.ಅಪರಾಹ್ನ ವಿದ್ವಾನ್ ದೀಪಕ್ ಕುಮಾರ್ ಬಳಗ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಶ್ರೀಕೃಷ್ಣಲೀಲಾ” ವಿಶಿಷ್ಟ ನೃತ್ಯ ಮತ್ತು ಗಾಯನ ರೂಪಕ ನಡೆಯಿತು.

ಆಕರ್ಷಕ ಶ್ರೀ ಕೃಷ್ಣ ರಥಯಾತ್ರೆ
ಪಡುಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಗೂಡ್ಲು ರವರು  ತೆಂಗಿನಕಾಯಿ ಹೊಡೆಯುವ ಮೂಲಕ  ಶ್ರೀ ಕೃಷ್ಣ ರಥಯಾತ್ರೆ ಚಾಲನೆ ನೀಡಿ ಶುಭ ಹಾರೖೆಸಿದರು.

ಬಳಿಕ ಶ್ರೀಕೃಷ್ಣ ರಥ” ಶಾಲಾ ಆವರಣದಿಂದ ಬಾಂಡ್ ವಾದ್ಯ ಬೊಂಬೆ ಕುಣಿತ, ಆಕರ್ಷಕ ಸುಡದ್ದು ಪ್ರದರ್ಶನ ಮತ್ತು ಕುಣಿತ ಭಜನೆಯೊಂದಿಗೆ ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ  ಮುಡಿಪಿನಡ್ಕ ಶ್ರೀಕೃಷ್ಣ ಭಜನಾ ಮಂದಿರದ ಆವರಣಕ್ಕೆ ಸಾಗಿ ಬಂದು  ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ  ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ರವರ ನೇತೃತ್ವದಲ್ಲಿ  ಶ್ರೀ ದೇವರ  ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ  ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಸಂಚಾಲಕ ವಿಘ್ನೇಶ್ ಹಿರಣ್ಯ, ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ ಬಿ, ಶ್ರೀಕೃಷ್ಣ ಹಿ. ಪ್ರಾ.ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಭಟ್ ಪಟ್ಟೆ, ಹಾಗೂ ಸಂಸ್ಥೆಗಳ ಅದ್ಯಾಪಕ ವೃಂದದವರು, ಎಸ್.ಕೆ. ಫ್ರೆಂಡ್ಸ್ ಮುಡಿಪಿನಡ್ಕ ಶ್ರೀಕೃಷ್ಣ ಯುವಕಮಂಡಲ ಪಟ್ಟೆ ಶ್ರೀಕೃಷ್ಣ ಹಿರಿಯ ವಿದ್ಯಾರ್ಥಿ ಸಂಘ ಪಟ್ಟೆ ಶ್ರೀಕೃಷ್ಣ ಭಜನಾ ಮಂಡಳಿ ಮುಡಿಪಿನಡ್ಕ ಅಯ್ಯಪ್ಪ ಭಜನಾ ಮಂಡಳಿ ಪೆರಿಗೇರಿ ನವಚೈತನ್ಯ ಯುವಕಮಂಡಲ ಪೆರಿಗೇರಿ ಇದರ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು, ಶಾಲಾ ಅಕ್ಷರದಾಸೋಹ ಸಿಬ್ಬಂದಿಗಳು, ಮಕ್ಕಳ ಪೋಷಕರು ಶಾಲಾ ಮಕ್ಕಳು ಮತ್ತು ಪುಟಾಣಿ ಮಕ್ಕಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here