ನೆಲ್ಯಾಡಿ: ಸೌತಡ್ಕ ಕಾಮಧೇನು ಗೋಶಾಲೆಗೆ ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಅವರು ಆ.20ರಂದು ಭೇಟಿ ನೀಡಿದರು.

ಗೋ ಸಾಕಾಣಿಕೆ ಬಗ್ಗೆ ಮಾಹಿತಿ ನೀಡಿದ ಡಾ.ಪ್ರಸನ್ನ ಹೆಬ್ಬಾರ್ ಅವರು, ಜಾನುವಾರು ಕೇಂದ್ರದಲ್ಲಿನ ಜಾನುವಾರುಗಳ ಸಾಕಾಣಿಕೆ, ಆರೋಗ್ಯದ ಬಗ್ಗೆ ತಿಳಿದು ಹರ್ಷ ವ್ಯಕ್ತಪಡಿಸಿದರು. ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಮಲೆನಾಡು ಗಿಡ್ಡ ತಳಿಯ ಶುದ್ಧ ಗೋ ಮೂತ್ರದಿಂದ ತುಳಸಿ ಗೋಅರ್ಕ ತಯಾರಿಸಲು ತುಳಸಿ ತುದಿಗಳು ಅವಶ್ಯಕವಾಗಿರುವುದರಿಂದ ಸೌತಡ್ಕ ಕ್ಷೇತ್ರದಲ್ಲಿ ದೇವರಿಗೆ ಉಪಯೋಗಿಸಿರುವ ತುಳಸಿ ತುದಿ/ಹಾರಗಳನ್ನು ನೀಡುವಂತೆಯೂ ಡಾ.ಪ್ರಸನ್ನ ಹೆಬ್ಬಾರ್ ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯನ್ನು ಕೋರಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಕೆ., ಸದಸ್ಯ ಗಣೇಶ್ ಕಾಶಿ, ಸೌತಡ್ಕ ಸಂರಕ್ಷಣಾ ಸಮಿತಿ ಅಧ್ಯಕ್ಷ ಪ್ರಶಾಂತ ರೈ ಅರಂತಬೈಲು ಉಪಸ್ಥಿತರಿದ್ದರು.