ಪುತ್ತೂರು: ಕಡಬ ಪಿಜಕ್ಕಳ ಮೂಲಕ ಎಡಮಂಗಳ ಸಂಪರ್ಕಿಸುವ ರಸ್ತೆ ಪಾಲೋಳಿ ಸೇತುವೆಯ ಬಳಿ ದುಸ್ಥಿತಿಯಲ್ಲಿದ್ದ ರಸ್ತೆಯನ್ನು ಕಡಬ ಶೌರ್ಯ ಬಳಗ ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಜೊತೆಗೂಡಿ ಆ.22 ರಂದು ದುರಸ್ಥಿಗೊಳಿಸಿದರು.

ನೂತನ ಕಡಬ ಪಟ್ಟಣ ಪಂಚಾಯತ್ ಸದಸ್ಯರಾದ ದಯಾನಂದ ಗೌಡ ಕೆಲಸದಲ್ಲಿ ಜೊತೆಗೂಡಿ ತಮ್ಮ ಕಾರ್ಯಾಚಟುವಟಿಕೆಗೆ ಮುನ್ನುಡಿ ಬರೆದರು ಹಾಗೂ ಹೆಚ್ಚಿನ ದುರಸ್ಥಿ ಮಾಡಲು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮತ್ತು ಗುತ್ತಿಗೆದಾರರನ್ನು ಸಂಪರ್ಕಿಸಿ ರಸ್ತೆಯ ಸ್ಥಿತಿಯನ್ನು ತಿಳಿಸಿದರು. ಇದಕ್ಕೆ ಕೂಡಲೇ ಇಲಾಖೆಯ ವತಿಯಿಂದ ಸುಗಮ ಸಂಚಾರದ ವ್ಯವಸ್ಥೆ ಮಾಡಲಾಗುವುದು ಎಂಬ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಶ್ರಮದಾನದಲ್ಲಿ ಪ್ರಮುಖರಾದ ಪೂವಪ್ಪ ಗೌಡ ಪಿಜಕ್ಕಳ, ಲೋಕೇಶ್ ಗೌಡ ಆರ್ತಿಲ,ಚಿಂತನ್, ವೇಣುಗೋಪಾಲ ರೈ ಕೊಲ್ಲಡ್ಕ,ಆನಂದ ಗೌಡ ಪಿಜಕ್ಕಳ ಮುಂತಾದವರು ಸಹಕರಿಸಿದರು.