ಕಾಣಿಯೂರು: ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 49ನೇ ವರ್ಷದ ಮೊಸರು ಕುಡಿಕೆ ಉತ್ಸವವು ಪುಣ್ಚತ್ತಾರು ಶ್ರೀ ಹರಿ ಸಭಾಭವನದಲ್ಲಿ ನಡೆಯಿತು.
ಹಿರಿಯರಾದ ಹುಕ್ರಪ್ಪ ಗೌಡ ಪುಣ್ಚತ್ತಾರು, ಪದ್ಮಯ್ಯ ಗೌಡ ಕೇಳುಳಗುಡ್ಡೆ, ಸುಂದರ ಗೌಡ ಬೆದ್ರಾಜೆ ಉದ್ಘಾಟಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳು, ಮಕ್ಕಳಿಗೆ ಮುದ್ದು ಕೃಷ್ಣ ವೇಷ ಸ್ಪರ್ಧೆ ನಡೆಯಿತು. ರಾತ್ರಿ ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿ, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ನಾವೂರು, ಶ್ರೀ ಕಾರ್ತೀಕೆಯ ಮಹಿಳಾ ಭಜನಾ ಮಂಡಳಿ ಪುಣ್ಚತ್ತಾರು ನಾವೂರು ಇವರಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಮಂಡಳಿ ಗೌರವಾಧ್ಯಕ್ಷ ನಾರಾಯಣ ಗೌಡ ಪುಣ್ಚತ್ತಾರು, ಅಧ್ಯಕ್ಷ ಮಧುಕರ ಬೇಂಗಡ್ಕ, ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಜತೆ ಕಾರ್ಯದರ್ಶಿಗಳಾದ ಮಾಧವ ಕಲ್ಪಡ, ಮುರಳೀಧರ ಪುಣ್ಚತ್ತಾರು, ಅರ್ಚಕ ಕರುಣಾಕರ ಬೀರುಕುಡಿಕೆ, ಕೋಶಾಧಿಕಾರಿ ಅಮರನಾಥ ಮಾಳಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.