






ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಕಾಲೇಜಿನ ಅದ್ವಯ ಸಾಹಿತ್ಯ ಸಂಘವು ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆಯ ಕೋಶದ ಸಹಭಾಗಿತ್ವದಲ್ಲಿ “ಸಾಹಿತ್ಯ ಮತ್ತು ಸಾಮಾಜಿಕ ಬದ್ಧತೆ” ವಿಚಾರಗೋಷ್ಠಿಯನ್ನು ಕಾಲೇಜಿನ ಸಭಾಂಗಣದಲ್ಲಿ ಸಂಘಟಿಸಿತು.



ಭಾರತ್ ಬೋಧ್ ಮಾಲ ಇದರ ಉಪನ್ಯಾಸ ಸರಣಿ 14ರ ಶೀರ್ಷಿಕೆ ಸಾಹಿತ್ಯ ಮತ್ತು ಸಾಮಾಜಿಕ ಬದ್ಧತೆ ಎಂಬ ವಿಷಯದಲ್ಲಿ ಚುಟುಕು ಸಾಹಿತ್ಯ ಪರಿಷತ್ ಸುಳ್ಯ ಇದರ ಅಧ್ಯಕ್ಷ ರಾದ ಶ್ರೀಮತಿ ಅಶ್ವಿನಿ ಕೊಡಿ ಬೈಲ್ ವಿಚಾರ ಧಾರೆಯನ್ನು ಮಂಡಿಸಿದರು. ಸಾಹಿತ್ಯದ ಅಭಿರುಚಿ ಬೆಳೆಸುವುದು ಮತ್ತು ಪರಿಪೋಷಿಸುವುದರಿಂದ, ಸಾಹಿತ್ಯ ಕ್ಷೇತ್ರದ ಆಳ ಮತ್ತು ವಿಸ್ತಾರವನ್ನು ಕುತೂಹಲದಿಂದ ಅನ್ವೇಷಣೆ ಮಾಡುತ್ತಾ ಹೋದ ಹಾಗೆ ವ್ಯಕ್ತಿತ್ವ ವಿಕಸನದೊಂದಿಗೆ ಸಾಹಿತ್ಯವು ಉತ್ಕೃಷ್ಟವಾದ ಅನುಭವವನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು. ಡಾ.ಶೋಭಿತಾ ಸತೀಶ್, ರಾಷ್ಟ್ರೀಯ ಮಂತ್ರಿ ವಿದ್ಯಾಭಾರತಿ ಉಚ್ಚ ಶಿಕ್ಷಣ ಸಂಸ್ಥಾನ (ನೊ) ಅವರು ಅಶ್ವಿನಿ ಕೊಡಿಬೈಲ್ ಅವರ ಸಾಹಿತ್ಯಕ್ಕೆ ಗಾಯನ ಹಾಡಿದರು.






ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಪ್ರಾಂಶುಪಾಲ ರಕ್ಷಣ್ ಟಿ ಆರ್ ವಹಿಸಿದ್ದರು. ಅದ್ವಯ ಸಾಹಿತ್ಯ ಸಂಘದ ಸಂಯೋಜಕಿ ಸಾಯಿ ಕೃಪಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳ ಪರಿಚಯವನ್ನು ಕನ್ನಡ ವಿಭಾಗದ ಮುಖ್ಯಸ್ಥ ಹರಿಶ್ಚಂದ್ರ ನಿರ್ವಹಿಸಿದರು. ಆಂತರಿಕ ಗುಣಮಟ್ಟದ ಭರವಸೆಯ ಕೋಶದ ಸಂಯೋಜಕಿ ರಶ್ಮಿ ಕೆ ಉಪಸ್ಥಿತರಿದ್ದರು. ಕು. ನಿಸ್ಮಿತಾ ಕೆ ಪ್ರಾರ್ಥನೆ ಹಾಡಿ, ಕು.ಗೀತಾ ವಂದಿಸಿದರು. ಕು. ಧನ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.










