ಪುತ್ತೂರು: 2025-26ನೇ ಸಾಲಿನ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
35 ಕೆ.ಜಿ.ಕ್ಕಿಂತ ಕಡಿಮೆ ತೂಕ ವಿಭಾಗದಲ್ಲಿ ರಿಯೋನ್ ಲಸ್ರಾದೋ, 45 ಕೆ.ಜಿ. ಕ್ಕಿಂತ ಕಡಿಮೆ ತೂಕ ವಿಭಾಗದಲ್ಲಿ ಮೊಹಮ್ಮದ್ ಶಾಜಿಲ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 17 ವರ್ಷದ ವಯೋಮಾನದ ಬಾಲಕರ 45 ಕೆ.ಜಿ. ಕ್ಕಿಂತ ಕಡಿಮೆ ತೂಕ ವಿಭಾಗದಲ್ಲಿ ಸ್ವರೂಪ್ ಕೃಷ್ಣ ದ್ವಿತೀಯ ಸ್ಥಾನ ಗಳಿಸಿದ್ದಾನೆ.