ಕಾವು ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 42ನೇ ವರ್ಷದ ಗಣೇಶೋತ್ಸವ

0

ಧಾರ್ಮಿಕ ಸಭಾ ಕಾರ್ಯಕ್ರಮ, ಶ್ರೀ ವಿನಾಯಕನ ಆಕರ್ಷಕ ಶೋಭಾಯಾತ್ರೆ


ಕಾವು :ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾವು ಇದರ ವತಿಯಿಂದ 42 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಆ 27 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.


ಶ್ರೀ ಗಣೇಶ ವಿಗ್ರಹ ಪ್ರತಿಷ್ಠೆ
ಬೆಳಿಗ್ಗೆ 6.30 ಕ್ಕೆ ಅರ್ಚಕರಾದ ವೇದಮೂರ್ತಿ ಶಿವಪ್ರಸಾದ್ ಕಡಮಣ್ಣಾಯ ಇವರ ಪೌರೋಹಿತ್ಯದಲ್ಲಿ ವಿಗ್ರಹ ಪ್ರತಿಷ್ಟೆ, ಬೆಳಿಗ್ಗೆ 9 ಗಂಟೆಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು.


ಭಗವಾದ್ವಜಾರೋಹಣ
ಗಣೇಶ ಪ್ರತಿಷ್ಟೆ ಬಳಿಕ ಭಗವಾದ್ವಜಾರೋಹಣ ನಡೆಯಿತು, ಸಮಿತಿ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಭಗವಾದ್ವಜಾರೋಹಣ ನೆರವೇರಿಸಿದರು,ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ನವೀನ ನನ್ಯ ಪಟ್ಟಾಜೆ,ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು,ಸಮಿತಿ ಸದಸ್ಯರು ಉಪಸ್ಥಿತರಿದ್ದರು.


ಧಾರ್ಮಿಕ ಸಭಾ ಕಾರ್ಯಕ್ರಮ
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದ ಮಂಗಳೂರು ಕ್ಯಾಂಪ್ಕೊ ಲಿಮಿಟೆಡ್ ನ ಉಪಾಧ್ಯಕ್ಷರಾದ ಶಂಕರನಾರಾಯಣ ಖಂಡಿಗೆ ಇಂದಿನ ಮಕ್ಕಳು ಹಾಗೂ ಯುವಪೀಳಿಗೆಗೆ ಹಿಂದೂ ಧರ್ಮದ ಸಂಸ್ಕೃತಿ, ಸಂಸ್ಕಾರ,ಹಾಗೂ ಆಧ್ಯಾತ್ಮಿಕ ವಿಷಯದ ಬಗ್ಗೆ ಅರಿವು ಕಡಿಮೆಯಾಗುತ್ತಿದ್ದು ಪೋಷಕರು ತಮ್ಮ ಮಕ್ಕಳಿಗೆ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ತಿಳಿಸುವಂತಾಗಬೇಕು,ಧಾರ್ಮಿಕ ನಂಬಿಕೆ ಗಟ್ಟಿಯಾದಾಗ ದೇಶವೂ ಬಲಿಷ್ಠವಾಗಲು ಸಾಧ್ಯವಿದೆ ಆದುದರಿಂದ ನಾವು ಧಾರ್ಮಿಕ ನಂಬಿಕೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತೀ ಅಗತ್ಯ ಎಂದರು.ಕಾವು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ದಿವ್ಯನಾಥ ಶೆಟ್ಟಿ ಕಾವು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಚಂದ್ರ ಶೇಖರ ರಾವ್ ನಿಧಿಮುಂಡ,ಲೋಕೇಶ್ ಚಾಕೋಟೆ,ಅಧ್ಯಕ್ಷರಾದ ನವೀನ್ ನನ್ಯಪಟ್ಟಾಜೆ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮಂಜಲ್ತಡ್ಕ ಉಪಸ್ಥಿತರಿದ್ದರು


ಸಮಿತಿಯ ಗೌರವ ಸಲಹೆಗಾರರಾದ ಲೋಕೇಶ್ ಚಾಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು,ಸಮಿತಿಯ ಅಧ್ಯಕ್ಷರಾದ ನವೀನ್ ನನ್ಯ ಪಟ್ಟಾಜೆ ವಂದಿಸಿದರು, ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು ವಾರ್ಷಿಕ ವರದಿ ವಾಚಿಸಿದರು. ದುರ್ಗಾವಾಹಿನಿ ಭಜನಾ ತಂಡದ ಸದಸ್ಯರು ಪ್ರಾರ್ಥಿಸಿದರು,ಸಮಿತಿಯ ಸದಸ್ಯರಾದ ದಿವ್ಯಪ್ರಸಾದ್ ಎ ಎಂ ಕಾರ್ಯಕ್ರಮ ನಿರ್ವಹಿಸಿದರು.ಸಮಿತಿ,ಪದಾಧಿಕಾರಿಗಳು ಸದಸ್ಯರು ಸಹಕರಿಸಿದರು.


ವಿಗ್ರಹ ದಾನಿಗಳಿಗೆ ಗೌರವಾರ್ಪಣೆ
ಗಣೇಶ ವಿಗ್ರಹ ದಾನಿಗಳಾಗಿರುವ ಭಾಸ್ಕರ ಬಲ್ಯಾಯ ಅಭಿಜ್ಞಾನ ಕಾವು ಇವರಿಗೆ ಶಾಲು,ಸ್ಮರಣಿಕೆ ,ಪ್ರಸಾದ ನೀಡಿ ಗೌರವಿಸಲಾಯಿತು.


ಭಜನಾ ಸೇವಾ ಕಾರ್ಯಕ್ರಮ
ಬೆಳಿಗ್ಗೆ ಮಹಾಗಣಪತಿ ಭಜನಾ ಮಂಡಳಿ ಗೆಳೆಯರ ಬಳಗ ಕಾವು,ದುರ್ಗಾವಾಹಿನಿ ಮಹಿಳಾ ಭಜನಾ ಮಂಡಳಿ ಮಾಣಿಯಡ್ಕ, ಓಂ ಶ್ರೀ ಭಜನಾ ಸಂಘ ಪಳನೀರು, ಶ್ರೀ ಪಂಚಲಿಂಗೇಶ್ವರ ಭಜನಾ ತಂಡ ಕಾವು, ತುಡರ್ ಭಜನಾ ಸಂಘ ನನ್ಯ, ತುಡರ್ ಮಾತೃ ಭಜನಾ ಮಂಡಳಿ ನನ್ಯ ಕಾವು,ಸುಜ್ಞಾನ ಮಕ್ಕಳ ಕುಣಿತ ಭಜನಾ ತಂಡ ನನ್ಯ ಕಾವು ಇವರುಗಳಿಂದ ಭಜನಾ ಸೇವೆ ನಡೆಯಿತು.


ಭಗವಾದ್ವಜಾವರೋಹಣ,ಶ್ರೀ ವಿನಾಯಕನ ಆಕರ್ಷಕ ವೈಭವದ ಶೋಭಾಯಾತ್ರೆ
ಸಂಜೆ 3 ಗಂಟೆಗೆ ಭಗವಾದ್ವಜಾವರೋಹನ ನಡೆಯಿತು. ಸಮಿತಿ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ನೇರವೇರಿಸಿದರು.ಬಳಿಕ ಶ್ರೀ ವಿನಾಯಕನ ಆಕರ್ಷಕ ಶೋಭಯಾತ್ರೆ ಹೊರಟು ಪಂಚವಟಿ ನಗರ,ಶಿವಪೇಟೆ ಮೂಲಕ ಸಾಗಿ ಆಮ್ಚಿನಡ್ಕ ಸೀರೆ ಹೊಳೆಯಲ್ಲಿ ಜಲಸ್ತಂಬನ ನಡೆಯಿತು.ಶೋಭಾಯಾತ್ರೆಗೆ ವಿವಿಧ ಕುಣಿತ ಭಜನಾ ತಂಡಗಳು ಭಾಗವಹಿಸಿ ಮೆರುಗು ನೀಡಿದರು.ಸಂಜೆ ಶ್ರೀ ಪಂಚಲಿಂಗೇಶ್ವರ ದೇವರಿಗೆ ಪೂಜೆ ನಡೆಯಿತು.

LEAVE A REPLY

Please enter your comment!
Please enter your name here