ಕುಂಬ್ರ ಶ್ರೀ ರಾಮ ಭಜನಾ ಮಂದಿರದ 44 ನೇ ವರ್ಷದ ಗಣೇಶೋತ್ಸವ

0

3 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ, ವೈಭವದ ಶೋಭಾಯಾತ್ರೆ

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆದ 44 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.29 ರಂದು ಸಂಪನ್ನಗೊಂಡಿತು. ಮೂರು ದಿನಗಳ ಕಾಲ ನಡೆದ ಗಣೇಶೋತ್ಸವದಲ್ಲಿ 3 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಇದಲ್ಲದೆ ಬೆಳಿಗ್ಗೆ ಮತ್ತು ಸಂಜೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಪ್ರತಿ ದಿನವೂ ಧಾರ್ಮಿಕ ಸಭೆ, ಉಪನ್ಯಾಸ, ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯರವರ ನೇತೃತ್ವದಲ್ಲಿ ಶ್ರೀ ಗಣೇಶ ದೇವರಿಗೆ ಪ್ರತಿ ದಿನ ಗಣಪತಿ ಹೋಮ ಸೇರಿದಂತೆ ವೈಧಿಕ ಕಾರ್ಯಕ್ರಮಗಳು ಹಾಗೇ ವಿಶೇಷ ರಂಗಪೂಜೆ ನಡೆಯಿತು. ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆಯು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಶೋಭಾಯಾತ್ರೆಯಲ್ಲಿ ಶ್ರೀ ಕೃಷ್ಣನ ಟ್ಯಾಬ್ಲೋ ಮತ್ತು ಕುಣಿತ ಭಜನೆ ಗಮನ ಸೆಳೆಯಿತು.

ವಿಶೇಷ ಸುಡುಮದ್ದಿನ ಪ್ರದರ್ಶನ ಮಾಡಲಾಗಿತ್ತು. ಇದಲ್ಲದೆ ಕುಂಬ್ರ ಅಶ್ವತ್ಥ ಕಟ್ಟೆಯ ಬಳಿ ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘದ ಪ್ರಾಯೋಜಕತ್ವದಲ್ಲಿ ಕಿರಣ್ ಕುಮಾರ್ ನೇತೃತ್ವದ ಗಾನಸಿರಿ ಕಲಾ ಕೇಂದ್ರದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಮನ ರಂಜಿಸಿತು. ಕುಂಬ್ರ ಶ್ರೀರಾಮ ಭಜನಾ ಮಂದಿರದಿಂದ ಹೊರಟ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆಯು ಕುಂಬ್ರ ಅಶ್ವತ್ಥ ಕಟ್ಟೆಯ ಬಳಿ ತಿಂಗಳಾಡಿ ಶ್ರೀ ದೇವತಾ ಸಮಿತಿಯ ಶ್ರೀ ಗಣೇಶ ವಿಗ್ರಹದ ಜೊತೆ ಸೇರಿ ಶೇಖಮಲೆಯ ಪುಣ್ಯ ನದಿಯಲ್ಲಿ ಇಬ್ಬರು ಗಣೇಶ ವಿಗ್ರಹದ ಜಲಸ್ಥಂಭನ ಕಾರ್ಯಕ್ರಮ ನಡೆಯಿತು. ಊರ ಪರವೂರ ನೂರಾರು ಭಕ್ತಾಧಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜಕೀಯ ಮುಖಂಡರು, ವಿವಿಧ ಸಂಘ ಸಂಸ್ಥೆಯವರು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ವಿವಿಧ ಗಣ್ಯರು, ಊರಪರವೂರ ಭಕ್ತರು ಶ್ರೀ ಗಣೇಶನ ದರ್ಶನ ಪಡೆದರು.


ಶ್ರೀರಾಮ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಪ್ರ.ಕಾರ್ಯದರ್ಶಿ ಹರೀಶ್ ರೈ ಮುಗೇರು, ಉಪಾಧ್ಯಕ್ಷರುಗಳಾದ ರತನ್ ರೈ ಕುಂಬ್ರ ಮತ್ತು ದಿನೇಶ್ ಗೌಡ ಪಂಜಿಗುಡ್ಡೆ, ಕೋಶಾಧಿಕಾರಿ ರಾಜ್‌ಪ್ರಕಾಶ್ ರೈ ಕುಂಬ್ರ, ಜೊತೆ ಕಾರ್ಯದರ್ಶಿ ಸುಷ್ಮಾ ಸತೀಶ್ ಪೂಜಾರಿ, ಶ್ರೀ ಗಣೇಶೋತ್ಸವ ಸಮಿತಿ ಸಂಚಾಲಕ ರಾಜೇಶ್ ರೈ ಪರ್ಪುಂಜ ಮತ್ತು ಅಂಕಿತ್ ರೈ ಕುಯ್ಯಾರು ಸೇರಿದಂತೆ ವಿವಿಧ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಮತ್ತು ಸಲಹಾ ಸಮಿತಿ ಸದಸ್ಯರುಗಳು ಸಹರಿಸಿದ್ದರು. ಒಳಮೊಗ್ರು ಗ್ರಾಪಂ, ಶ್ರೀ ಕ್ಷೇ.ಧ.ಗ್ರಾ.ಯೋಜನೆ, ಸ್ಪಂದನಾ ಕುಂಬ್ರ, ಪತಂಜಲಿ, ಸ್ನೇಹ ಯುವಕ ಮಂಡಲ ಪರ್ಪುಂಜ, ವರ್ತಕರ ಸಂಘ, ವಿಶ್ವ ಯುವಕ ಮಂಡಲ, ಜಾಗರಣ ವೇದಿಕೆ,ಕುಂಬ್ರ ಸಿಎ ಬ್ಯಾಂಕ್, ರಿಕ್ಷಾ ಚಾಲಕ ಮಾಲಕರ ಸಂಘ, ಶೇಖಮಲೆ ಗಣೇಶೋತ್ಸವ ಸಮಿತಿ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದವು.

LEAVE A REPLY

Please enter your comment!
Please enter your name here