ಉಪ್ಪಿನಂಗಡಿ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲ್ಪಟ್ಟ ನೇ ವರ್ಷದ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಯು ಶುಕ್ರವಾರದಂದು ವಿಜೃಂಭನೆಯಿಂದ ನಡೆಯಿತು.
ವಿವಿಧ ಟ್ಯಾಬ್ಲೊಗಳು, ಕುಣಿತ ಭಜನಾ ತಂಡಗಳು, ತಾಲೀಮು ತಂಡದ ಸಾಹಸ ಪ್ರದರ್ಶನಗಳು ಶೋಭಾ ಯಾತ್ರೆಗೆ ಮೆರಗು ನೀಡಿತು. ಸುರಿಯುತ್ತಿದ್ದ ಭಾರೀ ಮಳೆಯನ್ನೂ ಲೆಕ್ಕಿಸದೆ ಭಜನಾ ತಂಡದ ಸದಸ್ಯರು ಕುಣಿತ ಭಜನಾ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ದೃಢ ಸಂಕಲ್ಪದ ಮುಂದೆ ಸವಾಲುಗಳು ನಗಣ್ಯವೆಂದು ಸಾದರ ಪಡಿಸಿದರು. ಸ್ತಬ್ಧ ಚಿತ್ರಗಳ ಪೈಕಿ ಟೀಮ್ ಸಿಂಧೂರ ನೆಲ್ಯಾಡಿ ಅರ್ಪಿಸಿದ ಬ್ರಹ್ಮೋಸ್ ಕ್ಷಿಪಣಿಯ ಸ್ತಬ್ದ ಚಿತ್ರ ವೀಕ್ಷಕರ ಗಮನ ಸೆಳೆಯಿತು.

ಈ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ಎನ್. ಗೋಪಾಲ ಹೆಗ್ಡೆ, ಜೊತೆ ಕಾರ್ಯದರ್ಶಿಗಳಾದ ಶರತ್ ಕೋಟೆ, ಕೀರ್ತನ್ ಕುಮಾರ್ ಶೆಟ್ಟಿ ಕೊಯಿಲ, ಉಪಾಧ್ಯಕ್ಷ ಯು. ಯತೀಶ್ ಶೆಟ್ಟಿ, ಪ್ರಮುಖರಾದ ಸುನೀಲ್ ಕುಮಾರ್ ದಡ್ಡು, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ರಾಮಚಂದ್ರ ಮಣಿಯಾಣಿ, ಚಂದಪ್ಪ ಮೂಲ್ಯ, ಸ್ವರ್ಣೇಶ್ , ಪ್ರತಾಪ್ ಪೆರಿಯಡ್ಕ, ಸುರೇಶ್ ಅತ್ರಮಜಲು, ವಿದ್ಯಾಧರ ಜೈನ್, ಕೈಲಾರ್ ರಾಜಗೋಪಾಲ ಭಟ್ , ಐ. ಚಿದಾನಂದ ನಾಯಕ್ , ಗಣೇಶ್ ಶೆಣೈ, ಅನಂತರಾಯ ಕಿಣಿ, ನಾಗೇಶ್ ಪ್ರಭು, ಕರಾಯ ರಾಘವೇಂದ ನಾಯಕ್, ಯು. ರಾಜೆಶ್ ಪೈ, ವಿದ್ಯಾಲಕ್ಷ್ಮಿ ಪ್ರಭು, ಪ್ರಸನ್ನ ಪೆರಿಯಡ್ಕ, ಸುದರ್ಶನ್ ಎಂ., ತಿಮ್ಮಪ್ಪ ಗೌಡ, ಶೋಭಾ ದಯಾನಂದ್, ಜಯಶ್ರೀ ಜನಾರ್ದನ್ , ಬಿ.ಕೆ. ಅರುಣ್, ಮಾಧವ ಆಚಾರ್ಯ, ವಿಜಯ ಕುಮಾರ್ ಕಲ್ಲಳಿಕೆ, ಕೆ. ಜಗದೀಶ್ ಶೆಟ್ಟಿ, ಕೃಷ್ಣ ಪ್ರಸಾದ್ ದೇವಾಡಿಗ, ಗಗನ್ ಶೆಣೈ, ಉಷಾ ಮುಳಿಯ ಮತ್ತಿತರರು ಉಪಸ್ಥಿತರಿದ್ದರು.