ಪುತ್ತೂರು: ಕೆಎಸ್‌ಆರ್‌ಟಿಸಿ ಬಿಸಿರೋಡ್ ಘಟಕದಲ್ಲಿ ಸಿಬಂದಿ ಮೇಲ್ವಿಚಾರಕರಾಗಿದ್ದ ಕೆ. ನಾರಾಯಣ ಮಣಿಯಾಣಿ ಕುರಿಂಜಕೊಪ್ಪಳರವರು ಆ.30 ರಂದು ಸೇವಾ ನಿವೃತ್ತಿ ಹೊಂದಿದರು.
1989 ರಲ್ಲಿ ಹಾಸನ ವಿಭಾಗದಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡು, 1990 ರಲ್ಲಿ ಮಂಗಳೂರಿಗೆ ವರ್ಗಾವಣೆಗೊಂಡರು. 2011 ರಲ್ಲಿ ಪುತ್ತೂರು ಹೊಸ ವಿಭಾಗಕ್ಕೆ ವರ್ಗಾವಣೆಯಾಗಿ, 2013 ರಲ್ಲಿ ಸಹಾಯಕ ಹುದ್ದೆಗೆ ಪದೋನ್ನತಿ ಹೊಂದಿದರು. 2024 ರಲ್ಲಿ ಸಿಬಂದಿ ಮೇಲ್ವಿಚಾರಕರಾಗಿ ಪದೋನ್ನತಿ ಹೊಂದಿ ಬಿಸಿರೋಡ್ ಘಟಕಕ್ಕೆ ವರ್ಗಾವಣೆಗೊಂಡರು. ತನ್ನ 36 ವರ್ಷಗಳ ಸೇವಾವಧಿಯಲ್ಲಿ ವಿಭಾಗ ಕಚೇರಿ ಸಂಚಾರ ಶಾಖೆಯಲ್ಲಿ ಕಾರ್ಯಾಚರಣೆ ಮತ್ತು ತೆರಿಗೆ ನೋಂದಣಿ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಬಿಸಿರೋಡ್ ಘಟಕದಲ್ಲಿ ಸಿಬಂದಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಪಡೆದಿದ್ದಾರೆ. ನಿಗಮದಲ್ಲಿ 2006, 2008, 2010, 2013, ಹಾಗೂ 2023 ರಲ್ಲಿ ಉತ್ತಮ ಸೇವೆ ಪ್ರಯುಕ್ತ ನಗದು ಪುರಸ್ಕಾರ ಹಾಗೂ ಪ್ರಶಂಸಾ ಪತ್ರದೊಂದಿಗೆ ಗೌರವಿಸಲ್ಪಟ್ಟಿದ್ದಾರೆ. ತಾಯಿ ಸೀತಮ್ಮ, ಪತ್ನಿ ಅನಿತಾ, ಮಕ್ಕಳಾದ ಚೈತ್ರ ಮತ್ತು ಚಂದನ ಜೊತೆಗೆ ಅರಿಯಡ್ಕ ಗ್ರಾಮದ ಕುರಿಂಜಕೊಪ್ಪಳದಲ್ಲಿ ವಾಸ್ತವ್ಯ ಹೊಂದಿದ್ದಾರೆ.