ಪುತ್ತೂರು: ಮುಖ್ಯರಸ್ತೆಯಲ್ಲಿರುವ ದೇವಣ್ಣಕಿಣಿ ಕಟ್ಟಡದಲ್ಲಿರುವ ಮೋದಿ ಕೇರ್ ನಲ್ಲಿ ಸುದ್ದಿ ಅರಿವು ಮಾಹಿತಿ ಕೇಂದ್ರದಿಂದ ಪ್ರಾರಂಭಿಸಲಾದ ಆರಿ ವರ್ಕ್ ತರಬೇತಿಯ ಮೊದಲ ಬ್ಯಾಚ್ ತೇರ್ಗಡೆಗೊಂಡಿದ್ದು, ಇದರ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸೌಭಾಗ್ಯ ಆರ್. ಭಟ್, ನಾನು ಸಾಧನೆ ಮಾಡಲು ಹೊರಟಾಗ ಚುಚ್ಚು ಮಾತುಗಳನ್ನು ಹೇಳಿದ್ದರು. ಇದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದೆ ಆರಿ ವರ್ಕ್ ಕಲಿತು ತನ್ನನ್ನು ತಾನು ತೊಡಗಿಸಿಕೊಂಡು ಸಾಧನೆ ಮಾಡಿದ್ದೇನೆ. ಈ ಕ್ಷೇತ್ರದ ಸಾಧನೆಗೆ ಹಲವು ಪ್ರಶಸ್ತಿಗಳು ಬಂದವು. ಈಗ ಎಲ್ಲರೂ ನನ್ನ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ಹೀಗಾಗಿ ಗೃಹಿಣಿಯರು ಯಾವುದೇ ಕಾರಣಕ್ಕೂ ಮನೆಗೆ ಸೀಮಿತವಾಗಿರಬೇಡಿ. ಆರಿ ವರ್ಕ್ ತರಬೇತಿ ಪಡೆದು ಉದ್ಯೋಗ ಪ್ರಾರಂಭಿಸಿ. ಆ ಮೂಲಕ ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳಿ ಎಂದರು.

ಸುದ್ದಿ ಮಾಹಿತಿ ಕೇಂದ್ರದ ಶ್ರೀವರ್ಷ ಮಾತನಾಡಿ, ಏನೇ ಸಾಧನೆ ಮಾಡಬೇಕೆಂದರೆ ಛಲ, ಕಠಿಣ ಪರಿಶ್ರಮ ಅತ್ಯವಶ್ಯಕ. ತರಬೇತಿಯಲ್ಲಿ ಕಲಿತಿರುವುದನ್ನು ನಿರಂತರ ಅಭ್ಯಾಸ ಮಾಡುತ್ತಿರಿ. ಅಭ್ಯಾಸದಿಂದಲೇ ನೀವು ಕ್ಷೇತ್ರದಲ್ಲಿ ಸದೃಢವಾಗಲು ಸಾಧ್ಯವಾಗುತ್ತದೆ ಎಂದರು.
ಅಭ್ಯರ್ಥಿಗಳಾದ ಸುಜಾತ, ಶೋಭಾ ವಿ. ದಾಸ್, ನಿವೇದಿತಾ, ಸಹನ, ಶಾಂತಿ ಮೋಹನ್, ರೇಖಾವತಿ, ಲವಿತ ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಈ ವೇಳೆ ಅಭ್ಯರ್ಥಿಗಳು ತರಬೇತುದಾರರಿಗೆ ಕಿರುಕಾಣಿಕೆ ನೀಡಿ ಗೌರವಿಸಿದರು. ಸುದ್ದಿ ಮಾಹಿತಿ ಕೇಂದ್ರದ ರೇಷ್ಮಾ ಕೆ. ಉಪಸ್ಥಿತರಿದ್ದರು.