ಪುತ್ತೂರು: ವಿದ್ಯಾಭಾರತಿ ಕರ್ನಾಟಕ ವತಿಯಿಂದ ಸರಸ್ವತಿ ಶಾಲೆ ಕಡಬದಲ್ಲಿ ಆ.23ರಂದು ಜರುಗಿದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಸಿಂಚಿತಾ ಪಿ 9ನೇ ತರಗತಿ(ಪಿ ಕೃಷ್ಣಪ್ಪ ಗೌಡ ಮತ್ತು ಪುಷ್ಪ ದಂಪತಿ ಪುತ್ರಿ ) ಮತ್ತು ಹಸ್ತಾ ಎಚ್ ಶೆಟ್ಟಿ 9ನೇ ತರಗತಿ (ಹರೀಶ್ ಶೆಟ್ಟಿ ಮತ್ತು ರಾಜೇಶ್ವರಿ ಬೊಳಿಕ್ಕಳ ದಂಪತಿ ಪುತ್ರಿ) ಇವರು ವಿಜೇತರಾಗಿ ರಾಜ್ಯ ಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.
ಶಾಲಾ ಸಂಚಾಲಕರಾದ ಭಾಸ್ಕರ್ ಆಚಾರ್ ಹಿಂದಾರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಪ್ರಸನ್ನ ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.