ಹೊಸ ಮನೆ, ಕಛೇರಿ, ಮಳಿಗೆಗಳಿಗೆ ಲೈಟ್ಸ್ ಫ್ಯಾನ್ಸ್‌ಗಳ ಆಯ್ಕೆಗಾಗಿ ಪಶುಪತಿ ಮಲ್ಟಿ ಬ್ರಾಂಡೆಡ್ ಶೋರೂಂ

0

ಪುತ್ತೂರು: ಬೆಳಕಿನ ಮಹತ್ವ ಎಲ್ಲರಿಗೂ ಗೊತ್ತು. ನಮ್ಮೆದುರಿನ ಪ್ರತಿಯೊಂದು ವಸ್ತುವನ್ನು ನೋಡಬೇಕಾದರೂ ಬೆಳಕು ಬೇಕೇ ಬೇಕು. ಇಂತಹ ಬೆಳಕನ್ನು ಆಧುನಿಕ ಲೈಟ್ಸ್‌ಗಳ ಮೂಲಕ ಇನ್ನಷ್ಟು ವಿಸ್ಮಯಗೊಳಿಸಲು ಸಾಧ್ಯವೇ?


ಖಂಡಿತಾ ಸಾಧ್ಯ ಎನ್ನುತ್ತಾರೆ ಲೈಟ್ಸ್‌ಗಳ ಕನ್ಸಲ್ಟೆಂಟ್ ಪಶುಪತಿ ಶರ್ಮರವರು. ಲೈಟ್ಸ್ ಕನ್ಸಲ್ಟೆಂಟ್ ಎನ್ನುವುದು ಪುತ್ತೂರಿಗೆ ತೀರಾ ಹೊಸ ಪರಿಚಯ. ಮಹಾನಗರಗಳಲ್ಲಿ ಲೈಟ್ ಬಗ್ಗೆ ಒಂದಷ್ಟು ಅನ್ವೇಷಣೆಗಳು ಆಗಿವೆ. ಇದರ ಅರಿವಿದ್ದವರಷ್ಟೇ ತಿಳಿದುಕೊಂಡಿರಲು ಸಾಧ್ಯ. ಹೊಸ ಮನೆ ನಿರ್ಮಾಣ ಪ್ರತಿಯೋರ್ವರ ಕನಸು. ಹೀಗೆ ಕನಸು ಕಾಣುವ ಕಂಗಳು ಹೊಸತನವನ್ನೇ ಹುಡುಕುತ್ತಿರುತ್ತವೆ. ಅಡುಗೆ ಮನೆ, ಬೆಡ್ ರೂಂ, ಲಿವಿಂಗ್ ಹಾಲ್, ಡೈನಿಂಗ್ ಟೇಬಲ್, ಸ್ಟೇರ್‌ಕೇಸ್, ಅಂಗಳ, ನೆಲ, ಮಹಡಿ, ಇಂಟೀರಿಯರ್ ಡಿಸೈನ್ ಹೀಗೆ ಎಲ್ಲದರತ್ತಲೂ ಕಣ್ಣಾಡಿಸುವ ಮಂದಿಗೆ ಅವೆಲ್ಲವನ್ನು ಇನ್ನಷ್ಟು ಆಕರ್ಷಕವಾಗಿ, ಸ್ಪುಟವಾಗಿ ತೆರೆದಿಡಬೇಕೆಂಬ ಆಕಾಂಕ್ಷೆ. ಇದಕ್ಕೆ ಬೆಳಕೆಂಬ ತಂತ್ರಜ್ಞಾನದ ಅವಶ್ಯಕತೆ ಎಷ್ಟು ಎನ್ನುವುದನ್ನು ನಾವೆಲ್ಲಾ ಅರ್ಥ ಮಾಡಿಕೊಂಡೇ ಇಲ್ಲ.


ಸಮರ್ಪಕ ಬಳಕೆ, ವಿದ್ಯುತ್ ಉಳಿತಾಯ:
ನೈಸರ್ಗಿಕ ಬೆಳಕಿನಾಚೆಗೆ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರವಹಿಸುವ ಬೆಳಕು, ನಿಮ್ಮ ಮನೆಯನ್ನು, ಮನೆಯೊಳಗಿನ ಅಂದವನ್ನು ಒಪ್ಪ ಓರಣವಾಗಿ ಕಣ್ಣಿಗೆ ಕಟ್ಟುವಂತೆ ಮನಸ್ಸಿನೊಳಗೆ ತಲುಪಿಸುತ್ತದೆ. ಇದನ್ನು ಎಲ್ಲಿ, ಹೇಗೆ ಸಮರ್ಪಕವಾಗಿ ಬಳಕೆ ಮಾಡಬೇಕು ಹಾಗೂ ಲೈಟ್ಸ್, ಫ್ಯಾನ್ಸ್‌ಗಳ ಅಳವಡಿಸುವಿಕೆಯಲ್ಲಿಯೂ ಸಹ ಹೇಗೆ ವಿದ್ಯುತ್ ಉಳಿತಾಯ ಮಾಡಬಹುದು ಎನ್ನುವುದನ್ನು ತಿಳಿಸಿಕೊಡುವವರೇ ಲೈಟ್ ಹಾಗೂ ಫ್ಯಾನ್ ಕನ್ಸಲ್ಟೆಂಟ್. ಒಂದು ರೀತಿಯಲ್ಲಿ ಬೆಳಕಿನ ಇಂಜಿನಿಯರ್ ಎಂದರೂ ತಪ್ಪಾಗದು.


ಲೇಟೆಸ್ಟ್ ಅಪ್‌ಡೇಟ್‌ಗಳೊಂದಿಗೆ ಮೆರುಗು:
ಮನೆ ಅಥವಾ ಅಂಗಡಿಯೊಳಗೆ ಬೆಳಕು ಎಷ್ಟಿರಬೇಕು? ಬೆಳಕಿನ ಸಹಾಯದಿಂದ ವಸ್ತುಗಳನ್ನು ಆಕರ್ಷಿಸುವಂತೆ ಮಾಡುವುದು ಹೇಗೆ? ಈ ಎಲ್ಲಾವೂ ಸಾಧ್ಯವಾಗಬೇಕಾದರೆ ಹೇಗೇಗೊ ಮಾಡಿದರಾಗದು. ಅದಕ್ಕೆಂದೇ ಒಂದಷ್ಟು ನೈಪುಣ್ಯತೆ ಬೇಕು. ದೇಶ ವಿದೇಶದ ಮೂಲೆಮೂಲೆಗಳಲ್ಲಿ ನಡೆಯುತ್ತಿರುವ ಬೆಳಕಿನ ಚಮತ್ಕಾರವನ್ನು ಕರಗತ ಮಾಡಿಕೊಳ್ಳಬೇಕು. ಈ ಕ್ಷೇತ್ರದಲ್ಲಿ ಲೇಟೆಸ್ಟ್ ಅಪ್‌ಡೇಟ್‌ಗಳನ್ನು ತಿಳಿದುಕೊಂಡು ಬೆಳಕಿಗೆ ತಂತ್ರಜ್ಞಾನ ನೀಡುವ ಮೆರುಗನ್ನು ಅಭ್ಯಸಿಸಬೇಕು. ನಮ್ಮ ಊರಿಗೆ, ನಮ್ಮ ವಾತಾವರಣಕ್ಕೆ ಅದಷ್ಟು ಹೊಂದಿಕೊಳ್ಳುತ್ತದೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಅದರಲ್ಲಿ ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ಬಳಕೆಗೆ ತರಬೇಕು. ಕೊನೆಯದಾಗಿ ಸಂಪತ್ತಿನ ಮೂಲಗಳು ನಷ್ಟವಾಗದಂತೆ ಜಾಗರೂಕತೆ ವಹಿಸುವ ಜಾಣ್ಮೆ ಬೇಕು. ಅಂತಹ ನೈಪುಣ್ಯತೆ ಸಂಪಾದಿಸಿದ ಕೀರ್ತಿ ಪಶುಪತಿ ಮಲ್ಟಿ ಬ್ರಾಂಡೆಡ್ ಶೋರೂಂಗಿದೆ.


ಗ್ರಾಹಕರ ಮೆಚ್ಚುಗೆಯ ಪಶುಪತಿ ಮಲ್ಟಿ ಬ್ರಾಂಡೆಡ್ ಶೋರೂಂ:
ಲೈಟ್ಸ್ ಹಾಗೂ ಫ್ಯಾನ್ಸ್ ಮೇಳ ಆಯೋಜಿಸಿ ಗ್ರಾಹಕರ ಮೆಚ್ಚುಗೆ ಗಳಿಸಿರುವ ಪಶುಪತಿ ಮಲ್ಟಿ ಬ್ರಾಂಡೆಡ್ ಶೋರೂಂನಲ್ಲಿ ಗಾಳಿ ಮತ್ತು ಬೆಳಕಿನ ತಂತ್ರಜ್ಞಾನದ್ದೇ ಚಮತ್ಕಾರ. ಯಾವ ಕೋಣೆಗೆ ಯಾವ ಲೈಟ್ ಹಾಕಬೇಕು. ಅಡುಗೆ ಕೋಣೆಗೆ ಎಷ್ಟು ಪ್ರಮಾಣದ ಲೈಟ್‌ಬೇಕು. ಬೆಡ್ ರೂಂಗೆ ಹೊಂದಿಕೆಯಾಗುವ ಲೈಟ್ ಯಾವುದು. ಮನೆ ಹೊರಭಾಗಕ್ಕೆ ಎಷ್ಟು ದೊಡ್ಡ ಲೈಟ್ ವ್ಯವಸ್ಥೆ ಬೇಕು. ಈ ಲೈಟ್‌ಗಳನ್ನು ಬಳಸಿಕೊಳ್ಳುವಾಗ ವಿದ್ಯುತ್ ಪೋಲಾಗುವುದನ್ನು ತಡೆಯಲು ಯಾವ ಕ್ರಮ ಅನುಸರಿಸಬೇಕು. ವಿವಿಧ ಗಾತ್ರಗಳ ಪ್ಯಾನೆಲ್ ಲೈಟ್ಸ್, ಸ್ಪಾಟ್ ಲೈಟ್, ವನ್ ವೇ ಲೈಟ್, ಟೂ ವೇ ಲೈಟ್, ತ್ರೀ ವೇ ಲೈಟ್, ಒಳಾಂಗಣ ವಿನ್ಯಾಸ, ಔಟ್‌ಡೋರ್, ಸ್ವಿಮ್ಮಿಂಗ್ ಪೂಲ್, ಗಾರ್ಡನ್ ಮೊದಲಾದ ಪ್ರದೇಶಗಳಿಗೆ ಬೇಕಾಗುವಂತಹ ಲೈಟ್, ಸೆನ್ಸಾರ್ ಲೈಟ್, ಪ್ರೊಫೈಲ್ ಲೈಟ್, ವಿವಿಧ ವಿನ್ಯಾಸದ, ವಿವಿಧ ಬಣ್ಣದ ಲೈಟ್’ಗಳು ಇವಿಷ್ಟೇ ಅಲ್ಲ. ಲೈಟ್ ತಂತ್ರಜ್ಞಾನದ ಒಳ ಹೊಕ್ಕು ನೋಡಿದರೆ, ಅದೇ ಒಂದು ದೊಡ್ಡ ಪ್ರಪಂಚ.


ಆಧುನಿಕ ಬಿ.ಎಲ್.ಡಿ.ಸಿ ಫ್ಯಾನ್, ಇನ್ವರ್ಟರ್ ಲಭ್ಯ:
ಇನ್ನು ಫ್ಯಾನ್ ಬಗ್ಗೆ ಹೇಳುವುದಾದರೆ, ಆಧುನಿಕ ಬಿ.ಎಲ್.ಡಿ.ಸಿ ಫ್ಯಾನ್‌ಗಳು ನಮ್ಮ ಪುತ್ತೂರಿನಲ್ಲಿಯೇ ಲಭ್ಯ ಎನ್ನುವುದೇ ಪಶುಪತಿ ಶೋರೂಂನ ವಿಶೇಷತೆ. ಕಡಿಮೆ ವಿದ್ಯುತ್ ಬಳಸಿಕೊಂಡು, ತಂಪಾದ ಗಾಳಿ ಸೂಸುವ ಫ್ಯಾನ್‌ಗಳು, ರಿಮೋಟ್‌ನಿಂದಲೇ ಕಾರ್ಯನಿರ್ವಹಿಸುವ ಫ್ಯಾನ್‌ಗಳು, ಎಲ್.ಇ.ಡಿ. ಲೈಟ್ ಹೊಂದಿರುವ ಫ್ಯಾನ್‌ಗಳು, ಹೊಸ ಹೊಸ ವಿನ್ಯಾಸದ ಸೀಲಿಂಗ್ ಫ್ಯಾನ್‌ಗಳು ಹಾಗೂ ಟೇಬಲ್ ಫ್ಯಾನ್‌ಗಳನ್ನು ನೀವಿಲ್ಲಿ ಕಾಣಬಹುದು. ಮಾತ್ರವಲ್ಲ ಜನಪ್ರಿಯ ಕಂಪೆನಿಯ ಲೈಟ್ ಹಾಗೂ ಫ್ಯಾನ್‌ಗಳನ್ನು ನೀವಿಲ್ಲಿ ಕಾಣಬಹುದು. ಎಷ್ಟು ದೊಡ್ಡ ಕೋಣೆಗೆ ಯಾವ ಗಾತ್ರದ ಸೈಜ್‌ನ ಫ್ಯಾನ್‌ಗಳು ಸೂಕ್ತ ಎನ್ನುವುದನ್ನು ತಿಳಿದುಕೊಂಡು ನಿಮಗೆ ಫ್ಯಾನ್ ಸೆಲೆಕ್ಷನ್ ಮಾಡಲು ಸಲಹೆ ಹಾಗೂ ಇವುಗಳೊಂದಿಗೆ ಇನ್ವರ್ಟರ್‌ಗಳು, ಜನರೇಟರ್‌ಗಳೂ ಸಹ ಪಶುಪತಿ ಶೋರೂಂನಲ್ಲಿ ಲಭ್ಯವಿದೆ.


ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ, ವೆಂಕಟ್ರಮಣ ದೇವಸ್ಥಾನ, ಜಿಎಲ್, ಮುಳಿಯ, ಅರುಣಾ ಕಲಾಮಂದಿರ, ಪಾಪ್ಯುಲರ್ ಸ್ವೀಟ್ಸ್, ಮಂಗಳೂರಿನ ಪ್ರೆಸ್ಟೀಜ್, ನಿಶ್ಕಾ ಲೇಔಟ್, ಕದ್ರಿ ಕಂಬಳದ ಕಾಕುಂಜೆ ಸಿರಿ ಸೇರಿದಂತೆ ಹಲವು ಮನೆ ಹಾಗೂ ಕಛೇರಿಗಳು ಪಶುಪತಿ ಲೈಟ್ ಫ್ಯಾನ್ಸ್ ಹಾಗೂ ಇಲೆಕ್ಟ್ರಿಕಲ್ಸ್‌ನ ಗ್ರಾಹಕರೆಂಬುದು ಸಂತೋಷದ ವಿಚಾರ. ಮಹಾನಗರಗಳಲ್ಲಿ ಕಾಣಸಿಗುವ ಅಂಗಡಿ ಮತ್ತು ಮಳಿಗೆ, ಹೊಸ ಮನೆಗಳ ಬೆಳಕಿನ ಚಮತ್ಕಾರವನ್ನು ಪುತ್ತೂರಿನಲ್ಲಿಯೂ ನೀವು ಸಾಧ್ಯವಾಗಿಸಬಹುದು.



ಮನೆ ಬಾಗಿಲಿಗೆ ಸರ್ವೀಸ್..
ಪಶುಪತಿ ಮಲ್ಟಿ ಬ್ರಾಂಡೆಡ್ ಶೋರೂಂ ನಿಮ್ಮ ಮನೆ ಬಾಗಿಲಿಗೂ ಆಗಮಿಸುತ್ತದೆ. ಗ್ರಾಹಕರ ಅಭಿರುಚಿಯನ್ನು ಅರಿತುಕೊಂಡು, ಅದಕ್ಕೆ ಹೊಂದಿಕೆಯಾಗುವ ವ್ಯವಸ್ಥೆಯನ್ನು ಮಾಡಿಕೊಡಲು ಆಯಾ ಪ್ರದೇಶಕ್ಕೆ ಆಗಮಿಸಿ, ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ವಿದ್ಯುತ್ ಉಳಿತಾಯದ ಆಧುನಿಕ ಲೈಟ್ಸ್ ಹಾಗೂ ಫ್ಯಾನ್ಸ್ ಸೊಲ್ಯೂಷನ್ಸ್ ವ್ಯವಸ್ಥೆಯನ್ನು ನೀಡಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥ ಪಶುಪತಿ ಶರ್ಮ ತಿಳಿಸಿದ್ದಾರೆ.

ವಿಸ್ತೃತ ಮಳಿಗೆಯೊಂದಿಗೆ ಸೇವೆ..
ಪಶುಪತಿ ಮಲ್ಟಿ ಬ್ರಾಂಡೆಡ್ ಶೋರೂಂ ಇದೀಗ ವಿಸ್ತೃತ ಮಳಿಗೆಗೆ ಸ್ಥಳಾಂತರಗೊಂಡಿದೆ. ಪುತ್ತೂರಿನ ಬಂಟರ ಭವನದ ಪಕ್ಕದಲ್ಲಿರುವ ಜಿ.ಎಲ್.ಟ್ರೇಡ್ ಸೆಂಟರ್‌ನಲ್ಲಿ ಮಳಿಗೆ ಕಾರ್ಯನಿರ್ವಹಿಸುತ್ತಿದೆ. ಒಂದೇ ಅಂತಸ್ತಿನಲ್ಲಿ ಎಲ್ಲ ವಿಧದ ಅಂದರೆ ಸ್ಟ್ರಿಪ್ ಲೈಟ್ಸ್, ಡ್ರೈವರ್‌ಗಳು, ಪ್ರೊಫೈಲ್‌ಗಳು, ಕನ್ಸೀಲ್ಡ್ ಹಾಗೂ ಸರ್ಫೇಸ್ ಪ್ಯಾನೆಲ್ ಲೈಟ್ಸ್, ಮ್ಯಾಗ್ನೆಟಿಕ್ ಟ್ರ್ಯಾಕ್‌ಗಳು, ಟ್ರ್ಯಾಕ್ ಲೈಟ್ಸ್, ಟ್ಯೂಬ್ ಲೈಟ್ಸ್, ಬಲ್ಬುಗಳು, ಕೋಳಿ ಫಾರಂಗಳಿಗೆ ಬೇಕಾಗುವ ಲೈಟ್‌ಗಳು, ಗೇಟ್ ಲೈಟ್ಸ್, ವಾಲ್ ಲೈಟ್ಸ್, ಕಾಂಪೌಂಡ್ ಲೈಟ್ಸ್, ಹ್ಯಾಂಗಿಂಗ್ ಲೈಟ್ಸ್, ಸ್ಟ್ರೀಟ್ ಲೈಟ್ಸ್, ಫ್ಲಡ್ ಲೈಟ್ಸ್, ಸೋಲಾರ್ ಲೈಟ್ಸ್, ಗಾರ್ಡನ್ ಲೈಟ್ಸ್ ಹಾಗೂ ಬಿ.ಎಲ್.ಡಿ.ಸಿ ಫ್ಯಾನ್‌ಗಳು, ಎಕ್ಸಾಸ್ಟ್ ಫ್ಯಾನ್, ಸ್ವಿಚ್‌ಗಳು, ವೈರ್ ಹಾಗೂ ಇಲೆಕ್ಟ್ರಿಕಲ್ ವಸ್ತುಗಳು ಸಿಗುವ ಜೊತೆಗೆ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲಿದೆ.

ಜನರೇಟರ್‌ಗಳು ಲಭ್ಯ..
ಪಶುಪತಿ ಲೈಟ್ಸ್ ಫ್ಯಾನ್ಸ್ ಇಲೆಕ್ಟ್ರಿಕಲ್ಸ್ ಹಿಂದೆ ಸಂತ ಫಿಲೋಮಿನಾ ಕಾಲೇಜು ದರ್ಬೆಯ ಬಳಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿ ಗೃಹಬಳಕೆಗೆ, ಕೈಗಾರಿಕೆಗಳಿಗೆ, ಕಛೇರಿಗಳಿಗೆ, ವೆಲ್ಡಿಂಗ್ ಹಾಗೂ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ಸ್‌ಗಳಿಗೆ ಅವಶ್ಯಕವಿರುವ ಜನರೇಟರ್‌ಗಳು ಲಭ್ಯವಿದ್ದು ಬಜಾಜ್ ಹಾಗೂ ಇನ್ನಿತರ ಇ.ಎಂ.ಐ ಸೌಲಭ್ಯವೂ ಇದೆ.

LEAVE A REPLY

Please enter your comment!
Please enter your name here