ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರ್ಯಾಪು ಗ್ರಾಮದ ಸಂಟ್ಯಾರ್ ನಿವಾಸಿ ಹಿರಿಯ ಬಿಜೆಪಿ ಮುಖಂಡ,ಮಾಜಿ ಎಪಿಎಂಸಿ ಸದಸ್ಯ ಗುರುವ ಅವರು ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಶಾಸಕರಾದ ಅಶೋಕ್ ರೈ ಅವರು ಪಕ್ಷದ ಶಾಲು ನೀಡಿ ಗುರುವ ಹಾಗೂ ಕಮಲರವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗುರುವ “ಶಾಸಕ ಅಶೋಕ್ ರೈ ಶಾಸಕರಾದ ಬಳಿಕ ಪುತ್ತೂರಿನಲ್ಲಿ ಉತ್ತಮ ರೀತಿಯಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಬಡವರಿಗೆ ಅವರು ನೆರವು ನೀಡುತ್ತಿದ್ದು, ದಲಿತ ಸಮುದಾಯಕ್ಕೆ ಅವರು ಸಹಾಯ ಮಾಡುತ್ತಿದ್ದು, ಇದುವರೆಗೂ ಯಾವ ಶಾಸಕರೂ ಮಾಡದ ಅಭಿವೃದ್ದಿ ಕೆಲಸವನ್ನು ಮಾಡುತ್ತಿದ್ದು, ಬಡವರ ಕಣ್ಣೀರು ಒರೆಸುತ್ತಿದ್ದಾರೆ. ಇವೆಲ್ಲವನ್ನೂ ಮನಗಂಡ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ, ಪಕ್ಷದ ಮುಖಂಡರಾದ ಕೇಶವ ಸುವರ್ಣ, ಹಾರಿಸ್ ಸಂಟ್ಯಾರ್ ಉಪಸ್ಥಿತರಿದ್ದರು.