ಪುತ್ತೂರು: ಕುಂಬ್ರ ಶ್ರೀರಾಮ ಭಜನಾ ಮಂದಿರದ ಆಶ್ರಯದಲ್ಲಿ ನಡೆದ 44ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶ್ರೀ ಗಣೇಶ ವಿಗ್ರಹದ ಶೋಭಾ ಯಾತ್ರೆಯ ಸಂದರ್ಭದಲ್ಲಿ ಆ.29ರಂದು ಕುಂಬ್ರ ಅಶ್ವತ್ಥ ಕಟ್ಟೆಯ ಬಳಿ ಸ್ನೇಹ ಸಾಗರ ಆಟೋರಿಕ್ಷ ಚಾಲಕ ಮಾಲಕರ ಸಂಘದ ಪ್ರಾಯೋಜಕತ್ವದಲ್ಲಿ ಪುತ್ತೂರು ಗಾನಸಿರಿ ಕಲಾ ಕೇಂದ್ರದ ಕಿರಣ್ ಕುಮಾರ್ ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀರಾಮ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕೋಡಿ, ಸ್ನೇಹ ಸಾಗರ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳಾದ ಉದಯ ಮಡಿವಾಳ, ಅಶೋಕ್ ಪೂಜಾರಿ ಬಡಕೋಡಿ, ಶ್ರೀನಿವಾಸ್ ಪ್ರಸಾದ್ ಮುಡಾಲ, ಸತೀಶ್ ನಾಯ್ಕ್, ಗಂಗಾಧರ ಶಾಂತಿವನ, ಸತೀಶ್, ಧನಂಜಯ, ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು. ಸುಮಾರು 2 ಗಂಟೆಗಳ ಕಾಲ ನಡೆದ ಗಾನಸಿರಿ ಸಂಗೀತ ರ ಸಮಂಜರಿಯು ನೂರಾರು ಪ್ರೇಕ್ಷಕರ ಮನರಂಜಿಸಿತು.