ಪುತ್ತೂರು: ಉಪ್ಪಿನಂಗಡಿ ಮಠ, ಪುಳಿತ್ತಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಜೂಲಿಯನ ವಾಸ್ ಅವರ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭವು ಶಾಲಾ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಹಾಗೂ ಇ ಸಿ ಒ ಹರಿಪ್ರಸಾದ್, ಬಿ ಆರ್ ಟಿ ತನುಜಾ ಹಾಗೂ ನಿವೃತ್ತ ಮುಖ್ಯಗುರುಗಳ ಸಹೋದರ ಫಾದರ್ ಬಾಸಿಲ್ ವಾಸ್ ವರ್ಕಡಿ ಚರ್ಚ್ ನ ಪ್ರದಾನ ಗುರುಗಳು ಹಾಗೂ ಪತಿ ವಿಲಿಯಮ್, ಉಪಸ್ಥಿತರಿದ್ದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ವಿಷ್ಣುಪ್ರಸಾದ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್ ಪಾಟೀಲ್, ಮಾದರಿ ಶಾಲೆ ಉಪ್ಪಿನಂಗಡಿಯ ಮುಖ್ಯ ಗುರು ಹನುಮಂತ್, ಮುಖ್ಯ ಗುರುಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ಲಿಂಗರಾಜು, ಬಜತ್ತೂರು ಕ್ಲಸ್ಟರ್ ಸಿಆರಪಿ ಮಂಜುನಾಥ್, ಎಸ್ ಡಿ ಎಂ ಸಿ ಅಧ್ಯಕ್ಷೆ ಝಕರಿಯ ಹಾಗೂ ಮಾಜಿ ಅಧ್ಯಕ್ಷ ಯಾದವ ಆರ್ತಿಲ, ರಾಜೇಶ್ ಕಜೆಕಾರ್, ಉಪಾಧ್ಯಕ್ಷ ಮಾಧವ ಪೆಲತೋಡಿ, ಸ್ಥಳೀಯರಾದ ವೆಂಕಪ್ಪ ಪೂಜಾರಿ ಮರುವೇಲು, ಎಲ್ಲಾ ಶಾಲಾಭಿವೃದ್ಧಿ ಸದಸ್ಯರು, ಕಜೆಕಾರ್ ಅಂಬೇಡ್ಕರ್ ಸಮಿತಿಯವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಜೆಕಾರ್ ಅಂಬೇಡ್ಕರ್ ಸಮಿತಿ ವತಿಯಿಂದ ಶಾಲೆಗೆ ಕೊಡುಗೆಯಾಗಿ ಪೋಡಿಯಂ ನೀಡಿದರು. ಇದನ್ನು ಕ್ಷೇತ್ರ ಶಿಕ್ಷಣಾಧಿಕಾರಿಯ ಮೂಲಕ ಶಾಲೆಗೆ ಹಸ್ತಾಂತಿಸಿದರು.
ನಿವೃತ್ತಿ ಹೊಂದಿದ ಮುಖ್ಯಗುರುಗಳು ದೀಪ ಹಾಗೂ ಮಿಕ್ಸರ್ ಕೊಡುಗೆಯಾಗಿ ನೀಡಿದರು. ಶಿಕ್ಷಕಿ ರಮಣಿ ಸ್ವಾಗತಿಸಿ, ಅತಿಥಿ ಶಿಕ್ಷಕಿ ಶ್ವೇತಾ. ಪಿ. ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಮೋಹಿನಿ ವಂದಿಸಿದರು.