ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಸವಣೂರು ಶಿವಪ್ಪ ಗೌಡ ರವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಮಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿದ್ದು, ಪ್ರಸ್ತುತ ಪೋಲೀಸ್ ಇಲಾಖೆಯ ಮೆಸ್ಕಾಂ ವಿಜಿಲನ್ಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸವಣೂರಿನ ಶಿವಪ್ಪ ಗೌಡ ರವರು ಆ.19 ರಂದು ನಿಧನರಾಗಿದ್ದು, ಅವರ ವೈಕುಂಠ ಸಮಾರಾಧನೆ ಸೆ.3ರಂದು ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ‌ ಜರಗಿತು.

ಈ ಸಂದರ್ಭದಲ್ಲಿ ನುಡಿನಮನ ಸಲ್ಲಿಸುವ ಶ್ರದ್ಧಾಂಜಲಿ ಕಾರ್ಯಕ್ರಮ ಜರಗಿತು.

ಶಿವಪ್ಪ ಗೌಡ ಸರಳ ಸಜ್ಜನಿಕೆಯ ವ್ಯಕ್ತಿ- ಬೆಳಿಯಪ್ಪ ಗೌಡ
ಸಾಮಾಜಿಕ ‌ಮುಂದಾಳು ಬೆಳ್ಳಿಯಪ್ಪ ಗೌಡ ಚೌಕಿಮಠರವರು‌ ಮಾತನಾಡಿ ಶಿವಪ್ಪ ಗೌಡರವರು ಸಮಾಜ ಮತ್ತು ಕುಟುಂಬ ವರ್ಗದ ಪ್ರೀತಿ-ವಿಶ್ವಾಸವನ್ನು ಗಳಿಸಿದ್ದರು. ವೃತ್ತಿಯಲ್ಲಿ ಪೋಲೀಸ್ ಅಧಿಕಾರಿಯಾಗಿದ್ದರೂ, ಸಮಾಜ ಸೇವೆಯೊಂದಿಗೆ, ಧಾರ್ಮಿಕ ಕಾರ್ಯಕ್ರಮದಲ್ಲೂ ಭಾಗಿಯಾಗಿ, ಸರ್ವ ಜನರ ವಿಶ್ವಾಸಗಳಿಸಿದ ಸಜ್ಜನಿಕೆಯ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

ಶಿವಪ್ಪ ಗೌಡರವರ ಸಾಮಾಜಿಕ ಕಾಳಜಿ ಸಮಾಜಕ್ಕೆ ಪ್ರೇರಣೆ – ಗಿರಿಶಂಕರ್ ಸುಲಾಯ
ಸವಣೂರು ಗ್ರಾ.ಪಂ ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯರವರು ಮಾತನಾಡಿ ಶಿವಪ್ಪ ಗೌಡರವರು ಸವಣೂರಿನ ಹಲವು ಸಂಘಟನೆಗಳಲ್ಲಿ ದುಡಿದಿದ್ದಾರೆ. ಭಜನೆಯಲ್ಲಿ ಅವರಿಗೆ ಇದ್ದ ಪ್ರೀತಿ ಅಪಾರವಾದದ್ದು, ದೇಶ ಸೇವೆ ಮಾಡಬೇಕೆಂಬ ಉದ್ದೇಶದಿಂದ ಪೋಲೀಸ್ ಇಲಾಖೆಗೆ ಸೇರ್ಪಡೆಯಾಗಿ ಅಲ್ಲಿ 25 ವರ್ಷ ಸಾರ್ಥಕ ಸೇವೆ ಸಲ್ಲಿಸಿದ್ದರು. ವೃತ್ತಿಯಲ್ಲಿ‌ ಮಂಗಳೂರಿನಲ್ಲಿ ಇದ್ದರೂ, ಸವಣೂರಿನ ಬಗ್ಗೆ ಅವರಿಗೆ ತುಂಬಾ ಪ್ರೀತಿ ಇತ್ತು. ಶಿವಪ್ಪ ಗೌಡರವರ ಸಾಮಾಜಿಕ ಕಾಳಜಿಯ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದರು.

ಸವಣೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ ರೈ ದೇವಸ್ಯ, ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಡಾ. ಹರ್ಷಕುಮಾರ್ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶಿವಪ್ಪ ಗೌಡ ರವರ ತಾಯಿ ಜಾಕಮ್ಮ, ಪತ್ನಿ ಚಿತ್ರಾ, ಮಕ್ಕಳಾದ ವರುಣ್, ಭೂಮಿಕಾ, ಸಹೋದರರಾದ ಜತ್ತಪ್ಪ ಗೌಡ, ರಾಘವ ಗೌಡ, ಸುಂದರ ಗೌಡ, ಹೊನ್ನಪ್ಪ ಗೌಡ, ಸಹೋದರಿಯರಾದ ಯಮುನಾ, ಪುಷ್ಪಾವತಿ ಹಾಗೂ ಉಮಾವತಿ ಮತ್ತು ಭಾವಂದಿರು, ಅತ್ತಿಗೆಯಂದಿರು, ಕುಟುಂಬಸ್ಥರು, ಹಿತೈಷಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here