
ಹಿರೇಬಂಡಾಡಿ: ಇಲ್ಲಿನ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ವಠಾರದಲ್ಲಿ 108 ತೆಂಗಿನಕಾಯಿಯ ಶ್ರೀ ಮಹಾಗಣಪತಿ ಹೋಮದೊಂದಿಗೆ ದೇವಸ್ಥಾನದ ಅರ್ಚಕರಾದ ಗೋಪಾಲಕೃಷ್ಣ ತೋಳ್ಪಾಡಿತ್ತಾಯರ ಪೌರೋಹಿತ್ಯದಲ್ಲಿ 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27 ಮತ್ತು 28ರಂದು ನಡೆಯಿತು.

ಆ.27ರಂದು ಬೆಳಿಗ್ಗೆ 7.45ಕ್ಕೆ ಶ್ರೀ ಗಣೇಶನ ಮೂರ್ತಿ ಪ್ರತಿಷ್ಠೆ, ಬಳಿಕ 108 ತೆಂಗಿನಕಾಯಿ ಶ್ರೀ ಮಹಾಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಆ.28ರಂದು ಬೆಳಿಗ್ಗೆ ಮಹಾಪೂಜೆ, ಶ್ರೀ ಮಹಾಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಗಣಪತಿ ವಿಗ್ರಹದ ಶೋಭಾಯಾತ್ರೆಯು ದೇವಾಲಯದಿಂದ ಹೊರಟು ಮುರದಮೇಲು-ನೆಹರುತೋಟ-ಶಾಖೆಪುರ-ಪಾಲೆತ್ತಡಿ-ಮುರಕೋಟ್ರಾಸ್ ಎಲಿಯ ಅಂಗಡಿ ಬಳಿ ದಾಸರಮೂಲೆ-ಅಡ್ಯಾಲು, ನೆಕ್ಕಿಲು ಮಾರ್ಗವಾಗಿ ಸಾಗಿ ಕುಮಾರಧಾರ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಸಂಜೀವಿನಿ ಮಿತ್ರವೃಂದದ ವತಿಯಿಂದ ಫಲಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕನ್ಯಾನ, ಕಾರ್ಯದರ್ಶಿ ನವೀನ್ ಪಡ್ಪು, ಕೋಶಾಧಿಕಾರಿ ಬೆಳಿಯಪ್ಪ ಗೌಡ ಜಾಲು ಹಾಗೂ ಗಣೇಶೋತ್ಸವ ಸಮಿತಿ ಸದಸ್ಯರು, ಬೈಲುವಾರು ಸಮಿತಿ ಸಂಚಾಲಕರು, ಉತ್ಸವ ಸಮಿತಿ, ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ, ಭಜನಾ ಮಂಡಳಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.