ತಾ.ಮಟ್ಟದ ವಿಜ್ಞಾನ ವಿಚಾರಗೋಷ್ಠಿ: ವಿವೇಕಾನಂದ ಆ.ಮಾ ವಿದ್ಯಾರ್ಥಿ ಅತೀತ್ ಹೆಚ್. ರೈ ದ್ವಿತೀಯ

0

ಪುತ್ತೂರು: ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ, ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ಮೂಲಕ ಆಯೋಜಿಸಿರುವ ಪುತ್ತೂರು ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿಯು, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸಂತ ವಿಕ್ಟರನ ಬಾಲಿಕಾ ಪ್ರೌಢ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಸೆ.1ರಂದು ನಡೆಯಿತು.

ಪುತ್ತೂರು ತಾಲೂಕಿನ ವಿವಿಧ ಪ್ರೌಢ ಶಾಲೆಗಳಿಂದ ಹಲವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳು ಭಾಗವಹಿಸಿ “ಕ್ವಾಂಟಮ್ ಯುಗದ ಆರಂಭ: ಸಾಮರ್ಥ್ಯಗಳು ಮತ್ತು ಸವಾಲುಗಳು” ಎಂಬ ವಿಚಾರದ ಬಗ್ಗೆ ವಿಷಯವನ್ನು ಮಂಡಿಸಿದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ 9 ನೇ ತರಗತಿ ವಿದ್ಯಾರ್ಥಿ ಅತೀತ್ ಹೆಚ್. ರೈ ( ಹರೀಶ್ ರೈ ಮತ್ತು ಜಲಜಾ ಹೆಚ್ ರೈ ದಂಪತಿ ಪುತ್ರ)  ಅವರ ವಿಷಯ ಮಂಡನೆಗೆ ದ್ವಿತೀಯ ಸ್ಥಾನ ಲಭಿಸಿತು.

LEAVE A REPLY

Please enter your comment!
Please enter your name here