ಸುಳ್ಯಪದವು: ಕಾರಿನಲ್ಲಿ ಮಾಂಸ ಸಾಗಾಟ ಆರೋಪ- ಪೊಲೀಸರಿಂದ ವಿಚಾರಣೆ

0

ಸುಳ್ಯಪದವು: ಕಾರಿನಲ್ಲಿ ಅಕ್ರಮ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸರು ನಾಕಾಬಂಧಿ ನಡೆಸಿ ಕೇರಳದಿಂದ ಕರ್ನಾಟಕ ಕಡೆಗೆ ಬಂದ ಕೇರಳ ನೋಂದಣಿ ಕಾರನ್ನು ತಪಾಸಣೆಗೆ ಒಳಪಡಿಸಿದಾಗ ಕಾರಿನಲ್ಲಿ ಸುಮಾರು 40-45ಕೆ ಜಿ ಮಾಂಸ ಪತ್ತೆಯಾಗಿತ್ತು. ಬಳಿಕ ಚೆಕ್ ಪೋಸ್ಟ್ ನ ಪೊಲೀಸರು ಪುತ್ತೂರು ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ. ಕಾರಿನಲ್ಲಿದ್ದವರನ್ನು ವಿಚಾರಣೆ ನಡೆಸಿದಾಗ ಈಶ್ವರ ಮಂಗಳದ ಸಮೀಪದ ಮಸೀದಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಮೇಕೆ ಮಾಂಸವನ್ನು ತಂದದ್ದು ಎಂದು ಹೇಳಿರುವುದರಿಂದ ಅವರನ್ನು ವಿಚಾರಿಸಿ ಬಿಟ್ಟಿದ್ದೇವೆ ಎಂದು ಎಸ್ ಐ ಜಂಬೂರಾಜ್ ತಿಳಿಸಿದ್ದಾರೆ.


ಕಾರಿನಲ್ಲಿ ಬಂದದ್ದು ದನದ ಮಾಂಸ ಎಂದು ಹಿಂದೂ ಸಂಘಟನೆಗಳು ಆರೋಪ ಮಾಡಿದ್ದು ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here