ಆನೆಗುಂದಿ ಸರಸ್ವತಿ ಪೀಠಕ್ಕೆ ರಜತ ಹರಿವಾಣ, ಪಾದುಕೆ, ಪೀಠ ಸಮರ್ಪಣೆ ಹಿನ್ನೆಲೆ – ವಿಶ್ವಕರ್ಮ ಸಮಾಜಬಾಂಧವರಿಂದ ಪಾದುಕೆಗೆ ಪುಷ್ಪಾರ್ಚಣೆ ಕಾರ್ಯಕ್ರಮ

0

ಪುತ್ತೂರು: ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಯವರ 21ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಸಮಾಪ್ತಿಯಾಗುವ ಸಂದರ್ಭದಲ್ಲಿ ಆನೆಗುಂದಿ ಗುರುಸೇವಾ ಪರಿಷತ್ ಮಹಾಮಂಡಲ ಪುತ್ತೂರು ಇದರ ನೇತೃತ್ವದಲ್ಲಿ ವಿಶ್ವಕರ್ಮ ಸಮಾಜಬಾಂಧವರಿಂದ ಸೆ.5ರಂದು ಸಮರ್ಪಣೆ ಮಾಡಲಿರುವ ರಜತ ಹರಿವಾಣ, ಪಾದುಕೆ ಹಾಗೂ ಪೀಠಕ್ಕೆ ಪುಷ್ಪಾರ್ಚಣೆ ಕಾರ್ಯಕ್ರಮ ಸೆ.4ರಂದು ಪುತ್ತೂರು ಬೊಳುವಾರಿನ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.


ಪುರೋಹಿತ ವೇ.ಮೂ.ವಿಶ್ವೇಶ್ವರ ಬಾಳಿಲ ಅವರು ದೀಪ ಪ್ರಜ್ವಲಿಸಿ ವಿಶೇಷ ಪ್ರಾರ್ಥನೆ ಮಾಡಿದರು. ಈ ಸಂದರ್ಭ ಗುರುದೇವಾ ಪರಿಷತ್‌ನ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಕಾರ್ಯದರ್ಶಿ ನಿರಂಜನ ಆಚಾರ್ಯ ಮರೀಲು, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ, ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಆಚಾರ್ಯ, ರಜತ ಪೀಠದ ದಾನಿ ಶ್ರೀಧರ್ ಆಚಾರ್ಯ, ಅವರ ಸಹೋದರ ದಾಮೋದರ್ ಆಚಾರ್ಯ, ಪುತ್ರ ಗಣೇಶ್ ಕಲ್ಲರ್ಪೆ ದಂಪತಿ, ಮಹಿಳಾ ಸಂಘದ ಅಧ್ಯಕ್ಷೆ ಇಂದಿರಾ ಪುರುಷೋತ್ತಮ ಆಚಾರ್ಯ ಉಪಸ್ಥಿತರಿದ್ದರು. ಸಮಾಜ ಬಾಂಧವರು ಪಾದುಕೆ, ಹರಿವಾಣ ಮತ್ತು ಪೀಠಕ್ಕೆ ಪುಷ್ಪಾರ್ಚನೆ ಮಾಡಿದರು.

LEAVE A REPLY

Please enter your comment!
Please enter your name here