ಪುತ್ತೂರು: ಶ್ರೀ ಪ್ರಗತಿ ವಿಸ್ತಾರ ಏವಿಯೇಷನ್ ಹಾಗೂ ಮ್ಯಾನೆಜ್ಮೆಂಟ್ ಕಾಲೇಜಿನಲ್ಲಿ ಪೋಷಕ-ಶಿಕ್ಷಕರ ಸಭೆಯು ಸೆ.3ರಂದು ನಡೆಯಿತು.
ಈ ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಹೇಮಲತಾ ಗೋಕುಲ್ನಾಥ್, ಕಾರ್ಯದರ್ಶಿ ಗೋಕುಲ್ನಾಥ್ ಪಿ.ವಿ., ಖಜಾಂಜಿ ಸುದರ್ಶನ್ ಮೂಡಬಿದ್ರೆ, ಪ್ರಾಂಶುಪಾಲೆ ಮಾಧವಿ ಎನ್ ಸಿ. ಹಾಗೂ ಆಡಳಿತ ಅಧಿಕಾರಿಗಳು, ಅಧ್ಯಾಪಕರು ಉಪಸ್ಥಿತರಿದ್ದರು.

ಸಭೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಏವಿಯೇಷನ್ ಕ್ಷೇತ್ರದ ಮಹತ್ವವನ್ನು ವಿವರಿಸಲಾಯಿತು. ಏರ್ಪೋರ್ಟ್ ಮ್ಯಾನೆಜ್ಮೆಂಟ್, ಏರ್ಹೋಸ್ಟೆಸ್, ಗ್ರೌಂಡ್ ಸ್ಟಾಫ್ ಹಾಗೂ ಇನ್ನಿತರ ಅನೇಕ ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು. ಪೋಷಕರೊಂದಿಗೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಾಧನೆ, ಶಿಸ್ತಿನ ಪ್ರಗತಿ ಹಾಗೂ ಸಹಪಾಠ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯ ಬಗ್ಗೆ ಚರ್ಚಿಸಲಾಯಿತು. ಪೋಷಕರು ತಮ್ಮ ಮಕ್ಕಳ ಕಲಿಕೆ, ವ್ಯಕ್ತಿತ್ವ ವಿಕಾಸ ಮತ್ತು ವೃತ್ತಿ ದಾರಿಯ ಕುರಿತು ಶಿಕ್ಷಕರೊಂದಿಗೆ ಸಂವಾದ ನಡೆಸಿದರು.